Published
1 month agoon
By
Akkare Newsಕಾಣಿಯೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮರಕ್ಕಡ ಶ್ರೀ ಉಳ್ಳಾಕುಲು ಮಹಿಳಾ ಮಂಡಲದ ಉದ್ಘಾಟನೆ ನಡೆಯಿತು. ಅರ್ಚಕ ಪ್ರಶಾಂತ್ ಭಟ್ ಕಟ್ಟತ್ತಾರು ಅವರು ನೂತನ ಮಹಿಳಾ ಮಂಡಲವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮರಕ್ಕಡ ಉಳ್ಳಾಕುಲು ದೈವಸ್ಥಾನದ ಅನುವಂಶೀಯ ಮೊಕ್ತೇಸರರಾದ ಗೋಪಾಲಕೃಷ್ಣ ಭಟ್ ನಾರ್ಯ, ಮರಕ್ಕಡ ಉಳ್ಳಾಕುಲು ದೈವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಕರಂದ್ಲಾಜೆ, ಶ್ರೀ ಉಳ್ಳಾಕುಲು ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಗೌಡ ಬೈತಡ್ಕ, ದೈವಸ್ಥಾನದ ಮೊಕ್ತೇಸರರಾದ ಕೇಶವ ಮರಕ್ಕಡ, ಮತ್ತು ನಾಲ್ಕು ಮನೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಶ್ರೀ ಉಳ್ಳಾಕುಲು ಮಹಿಳಾ ಮಂಡಲದ ಗೌರವಾಧ್ಯಕ್ಷರಾಗಿ ರೇವತಿ ಮರಕ್ಕಡ, ಅಧ್ಯಕ್ಷರಾಗಿ ಪಾರ್ವತಿ ದಾಮೋದರ ಗೌಡ ಬೊಮ್ಮೊಡಿ, ಉಪಾಧ್ಯಕ್ಷರಾಗಿ ಮೋಹಿನಿ ನಾರ್ಯ, ಅಕ್ಷಿತಾ ಸುಧೀರ್ ಮರಕ್ಕಡ, ಕಾರ್ಯದರ್ಶಿಯಾಗಿ ಯಶ್ಮಿತಾ ಗಣೇಶ್ ಮರಕ್ಕಡ, ಜತೆ ಕಾರ್ಯದರ್ಶಿಯಾಗಿ ಅನುಷಾ ಅವಿನಾಶ್ ಬೈತಡ್ಕ, ಕೋಶಾಧಿಕಾರಿಯಾಗಿ ರಂಜಿತಾ ಪ್ರಗತ್ ರಾಜ್ ಬೈತಡ್ಕ, ಸದಸ್ಯರಾಗಿ ಸವಿತಾ ಮರಕ್ಕಡ, ಪಾರ್ವತಿ ಕೆ, ಗಿರಿಜಾ, ವನಿತಾ, ಜಯಶ್ರೀ ಕೆ, ಸರೋಜಿನಿ, ಮೋಹಿನಿ, ಸುಮಿತ್ರಾ, ಹೇಮಲತಾ, ಮೀನಾಕ್ಷಿ ನಾರ್ಯ ಆಯ್ಕೆಗೊಂಡರು.