Published
1 month agoon
By
Akkare Newsಪುತ್ತೂರು, ಕಡಬ ದಲ್ಲಿ ಮರಳು ಮಾಫಿಯ ಆಗುತ್ತಿದ್ದರು ಅಧಿಕಾರಿಗಳು ಕೈ ಕಟ್ಟಿ ಕುಳಿತು ಕೊಳ್ಳಲು ಕಾರಣ ವಾದರೂ ಏನೂ….!!???
ಮಂಗಳೂರು: ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ದೋಣಿಗಳನ್ನು ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗುರುಪುರ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದರು.
ಬಂಟ್ವಾಳ , ಮಂಗಳೂರು ನಲ್ಲಿ ನಿರಂತರ ಮರಳು ಅಡ್ಡೆಗೆ ದಾಳಿ ಮಾಡುವ ಅಧಿಕಾರಿ ಗಳಿಗೆ, ಪುತ್ತೂರು ಗೆ ಬರಲು ಪೆಟ್ರೋಲ್ ಇಲ್ಲವೇ..?! ಎಂದು ದುಪ್ಪಟ್ಟು ಬೆಲೆ ಗೆ ಮರಳು ಖರೀದಿ ಮಾಡಿ ಮನೆ ಕಟ್ಟುತಿರುವ ಬಡ ಜನರು ಅಧಿಕಾರಿಗಳಿಗೆ ಶಾಪ ಇಡುತ್ತಿದ್ದಾರೆ…
ಈ ಸಂದರ್ಭ ಸ್ಥಳದಲ್ಲಿದ್ದ 5 ದೋಣಿಗಳನ್ನು ಒಂದು ಮೋಟಾರು, ಗ್ಯಾಸ್ ಸಿಲಿಂಡರ್ ವಶಪಡಿಸಲಾಯಿತು. ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್‌ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಗಣಿ ಇಲಾಖೆಯ ಭೂವಿಜ್ಞಾನಿ ಗಿರೀಶ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.