ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪುತ್ತೂರು ಇದರ ಸಾರಥ್ಯದಲ್ಲಿ ಡಿ.28-29 ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮ ಸಂಗಮ ಸುಬ್ರಹ್ಮಣ್ಯ ಶ್ರೀಗಳಿಂದ ಆಮಂತ್ರಣ ಪತ್ರ ಬಿಡುಗಡೆ

Published

on

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಸಾರಥ್ಯದಲ್ಲಿ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮಸಂಗಮ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

 

 

ಸುಬ್ರಹ್ಮಣ್ಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಮಹಾಲಿಂಗೇಶ್ವರ ದೇವರ ಎದುರು ವಿಶೇಷ ಪ್ರಾರ್ಥನೆ  ನೆರವೇರಿಸಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.

 

 

ನಂತರ ಮಾತನಾಡಿದ ಸ್ವಾಮಿಜೀ, ಶ್ರೀನಿವಾಸ ಕಲಿಯುಗದ ಪ್ರತಿಯೊಬ್ಬನ ಮನೆದೇವರು. ಶ್ರೀನಿವಾಸ ವೈಕುಂಠ ಕ್ಷೇತ್ರ ಭೂಮಿಯ ಮೇಲಿನ ಪರಮಪವಿತ್ರ ಕ್ಷೇತ್ರ. ಅಲ್ಲಿಯ ಕೃಪೆಯಿಂದ ಉತ್ಸವ ಮೂರ್ತಿಗಳಲ್ಲಿ ಬಂದು ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತದೆ. ಇದಕ್ಕೆ ವಿಶೇಷ ಸಾನಿಧ್ಯವಿದೆ.

ಕಳೆದ ವರ್ಷ ವೈಭವದಿಂದ ಪುತ್ತೂರಿನಲ್ಲಿ ಕಲ್ಯಾಣೋತ್ಸವ ನಡೆದಿದೆ. ಈ ವರ್ಷವೂ ಕಲ್ಯಾಣೋತ್ಸವ ಮೂಲಕ ಸನಾತನ ಧರ್ಮದ ಉದ್ದೀಪನ ಕಾರ್ಯ ನಡೆಯುತ್ತದೆ ಎಂದು ಸ್ವಾಮೀಜಿ ಶುಭಹಾರೈಸಿದರು.

 

 

 

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಡಿ.28 ಮತ್ತು 29ರಂದು ನಡೆಯುವ ಎರಡನೇ ವರ್ಷದ  ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ಜರುಗುತ್ತದೆ. ಧರ್ಮಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತದೆ. ಸನಾತನ ಧರ್ಮ ಪರಂಪರೆಯ ಕಲ್ಯಾಣಕ್ಕಾಗಿ  ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಎಲ್ಲಾ ಹಿಂದೂ ಬಂಧುಗಳ ಸಹಕಾರ ಬೇಕಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ  ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯರಾದ ಬೂಡಿಯಾರು ರಾಧಾಕೃಷ್ಣ ರೈ, ಗೋಪಾಲಕೃಷ್ಣ ಭಟ್ ದ್ವಾರಕ, ಚಂದಪ್ಪ ಮೂಲ್ಯ,ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಸ್ವಾಗತ ಸಮಿತಿ ಸಂಚಾಲಕರಾದ ಪ್ರಸನ್ನ ಕುಮಾರ್ ಮಾರ್ತ,ಅನಿಲ್ ತೆಂಕಿಲ, ಕಾರ್ಯಧ್ಯಕ್ಷ ಉಮೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ, ಕೋಶಾಧಿಕಾರಿ ಉದಯಕುಮಾರ್ ರೈ, ಕಾರ್ಯದರ್ಶಿಗಳಾದ ಗಣೇಶ್ ಭಟ್ ಮಕರಂದ, ಪ್ರವೀಣ್ ಶೆಟ್ಟಿ ತಿಂಗಳಾಡಿ ಸಹಿತ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement