Published
1 month agoon
By
Akkare Newsಪುತ್ತೂರು:: ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಕೃತಿ ಮಹೋತ್ಸವ ವತಿಯಿಂದ ನಡೆದ ರಾಷ್ಟ್ರಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ನಿಖಿಲ್ ಕ್ಲೇ ಮಾಡೆಲಿಂಗ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮಧ್ಯಪ್ರದೇಶದ ಉಜ್ಜೈನಿಯ ಸರಸ್ವತಿ ವಿದ್ಯಾ ಮಂದಿರದ ಸಂಸ್ಕೃತಿ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ಸ್ಪರ್ಧೆ ನಡೆದಿತ್ತು.
ನಿಖಿಲ್ ಕೋಡಿಂಬಾಡಿ ನಿವಾಸಿ ಕೃಷ್ಣಪ್ಪ ಮತ್ತು ಧನವತಿ ದಂಪತಿ ಪುತ್ರ. ಶಾಲಾ ಚಿತ್ರಕಲಾ ಶಿಕ್ಷಕ ರುಕ್ಮಯ ತರಬೇತಿ ಮಾರ್ಗದರ್ಶನ ನೀಡಿದ್ದರು.