Published
1 month agoon
By
Akkare Newsಪುತ್ತೂರು: ಮುಂಡೂರು-ತಿಂಗಳಾಡಿ ರಸ್ತೆಯ ಆಲಡ್ಕ ಎಂಬಲ್ಲಿರುವ ಪ್ರಯಾಣಿಕರ ತಂಗುದಾಣವೊಂದರ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು ಸಂಬಂಧಪಟ್ಟವರು ಈ ತಂಗುದಾಣ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ತಂಗುದಾಣದಲ್ಲಿ ಬೆಳಗ್ಗಿನ ಹೊತ್ತು ಹಲವಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಇದೀಗ ಬಸ್‌ಸ್ಟ್ಯಾಂಡ್‌ಗೆ ಮೇಲ್ಛಾವಣಿಯೇ ಇಲ್ಲದ ಕಾರಣ ಊಟಕ್ಕಿಲ್ಲದ ಉಪ್ಪಿಕಾಯಿಯಂತಾಗಿದೆ. ಇದು ಸಂಬಂಧಪಟ್ಟವರ ಗಮನಕ್ಕೆ ಬಂದಿಲ್ಲವೇ ಅಥವಾ ಗೊತ್ತಿದ್ದೂ ಸುಮ್ಮನಾಗಿದ್ದಾರೆಯೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಪ್ರಸ್ತುತ ಇದೇ ಬಸ್ಟ್ಯಾಂಡ್ ಕಟ್ಟಡವನ್ನು ದುರಸ್ತಿಗೊಳಿಸಬೇಕು ಇಲ್ಲವೇ ನೂತನ ಪ್ರಯಾಣಿಕರ ತಂಗುದಾಣದ ವ್ಯವಸ್ಥೆಯನ್ನು ಮಾಡಬೇಕು ಎಂದು ಸ್ಥಳೀಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಳೆಗಾಲ ದಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣ ಇದ್ದರೂ ಕೂಡ ಕೊಡೆ ಹಿಡಿದುಕೊಂಡು ನಿಲ್ಲುವ ಪರಿಸ್ಥಿತಿ ಬಂದಿರುತ್ತದೆ ಮುಂದಿನ ದಿನಗಳಲ್ಲಿ ಈ ರಸ್ತೆಯ ಅಭಿವೃದ್ಧಿಯಾಗುವ ದೃಷ್ಟಿಯಲ್ಲಿ ಸ್ಥಳೀಯ ಪಂಚಾಯಿತಿ ಸದಸ್ಯರು ಕೂಡಲೇ ಇತ್ತ ಗಮನ ಹರಿಸಿ ಬಸ್ ಸ್ಟ್ಯಾಂಡನ್ನು ದುರಸ್ತಿಗೊಳಿಸಬೇಕಾಗಿ ಸ್ಥಳೀಯರು ಅಗ್ರಹಿಸಿರುತ್ತಾರೆ.