Published
1 month agoon
By
Akkare Newsಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹಣ ಹಂಚುವ ಕುರಿತು ವಿಪಕ್ಷ ನಾಯಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಹುಜನ ವಿಕಾಸ್ ಅಘಾಡಿ ಕಾರ್ಯಕರ್ತರು ಹಣ ಹಂಚಿದ್ದಾರೆ ಎನ್ನುವ ಆರೋಪದ ಮೇಲೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವೆ ಅವರಿಗೆ ಥಳಿಸಿದ್ದಾರೆ.
ವಿನೋದ್ ತಾವೆ ವಿರಾರ್ ಪಟ್ಟಣದಲ್ಲಿರುವ ಹೋಟೆಲ್‌ವೊಂದರಲ್ಲಿ, ಚುನಾವಣಾ ಕಾರ್ಯಕರ್ತರು ಹಾಗೂ ಮತದಾರರಿಗೆ ರೂಪಾಯಿ 5 ಕೋಟಿ ನಗದು ಹಂಚುತ್ತಿದ್ದರು ಎಂದು ಆರೋಪಿಸಲಾಗಿದೆ. ಹೋಟೆಲ್‌ನಲ್ಲಿ ಕಾರ್ಯಕರ್ತರು ಹಾಗೂ ಮತದಾರರಿಗೆ ರಾಪಾಯಿ 5 ಕೋಟಿ ನಗದು ಹಂಚುತ್ತಿರುವಾಗ ವಿನೋದ್ ತಾವೆ ಸಿಕ್ಕಿಬಿದ್ದಿದ್ದಾರೆ ಎಂದು ಬಹುಜನ ವಿಕಾಸ್ ಅಘಾಡಿ ಮುಖಂಡರು ಆರೋಪಿಸುತ್ತಿದ್ದಾರೆ.
ವಿನೋದ್ ತಾವೆ ಐದು ಕೋಟಿಯ ನಗದು ಹೊತ್ತ ಬ್ಯಾಗ್‌ನ್ನು ಹೊಂದಿದ್ದು, ಇನ್ನೊಂದು ಮೂಲದ ಪ್ರಕಾರ ಡೈರಿಯಲ್ಲಿ ರೂ. 15 ಕೋಟಿ ಹಣವನ್ನು ಹಂಚಿದ ಬಗ್ಗೆ ಉಲ್ಲೇಖವಿದೆ ಎಂದು ವರದಿಯಾಗಿದೆ. ಈ ಆರೋಪಗಳು ಮಹಾರಾಷ್ಟ್ರ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೀವ್ರ ಬೆಳವಣಿಗೆಯನ್ನು ಕಂಡಿದ್ದು, ಈ ಘಟನೆ ಕುರಿತು ತನಿಖೆ ನಡೆಸಲು ಸಾಕಷ್ಟು ಒತ್ತಾಯ ಕೇಳಿಬಂದಿದೆ.