ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಸಾಲ್ಮರ : ಕೂಲಿ ಕಾರ್ಮಿಕ ಶಿವಪ್ಪ ಮೃತ ದೇಹ ರಸ್ತೆಯಲ್ಲಿ ಮಲಗಿಸಿದ ಪ್ರಕರಣ ಮಿಲ್ ಮಾಲಕ ಬಂಧನಕ್ಕೆ ಡೆಡ್ ಲೈನ್ ಪೊಲೀಸ್ ಇಲಾಖೆ ಬಂದಿಸದಿದ್ದಲ್ಲಿ ನಾಳೆ ರಸ್ತೆ ತಡೆದು ಉಗ್ರ ಪ್ರತಿಭಟನೆ: ದಲಿತ ಸಂಘಟನೆ

Published

on

ಪುತ್ತೂರು: ಮೃತಪಟ್ಟ ಕೂಲಿ ಕಾರ್ಮಿಕ ಶಿವಪ್ಪ ಕೆರೆಮೂಲೆ ಎಂಬವರನ್ನ ರಸ್ತೆ ಬದಿ ಮಲಗಿಸಿ ಅವಮಾನಕಾರಿ ರೀತಿಯಲ್ಲಿ ಬಿಟ್ಟು ಹೋದ ಮಾಲಕನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ಇಲ್ಲೀವರೆಗೂ ಪುತ್ತೂರು ನಗರ ಠಾಣಾ ಪೊಲೀಸರು ಹೆನ್ರಿ ತಾವ್ರೋನನ್ನ ಬಂಧಿಸದಿರುವುದಕ್ಕೆ ದಲಿತ ಸಂಘಟನೆ ಆಕ್ರೋಶ ಹೊರಹಾಕಿದ್ದಾರೆ.

 

 

ಈ ಬಗ್ಗೆ ಪುತ್ತೂರುನಲ್ಲಿ ಸುದ್ದಿಗೋಷ್ಟೀಯನ್ನುದ್ದೇಶಿಸಿ ಮಾತನಾಡಿದ ಆದಿ ದ್ರಾವಿಡ ಸಮಾಜ ಸಂಘದ ಪುತ್ತೂರು ಘಟಕ ಅಧ್ಯಕ್ಷ ಬಾಬು, ಹೆನ್ರಿ ಅವರು ಶಿವಪ್ಪ ಅವರನ್ನ ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅದೇ ಪಿಕಪ್ ವಾಹನದಲ್ಲಿ ಹೆನ್ರಿ ತಾವ್ರೋ, ಸ್ಟ್ಯಾನ್ಲಿ ಹಾಗೂ ಅಪರಿಚಿತರೊಬ್ಬರು ಶಿವಪ್ಪರನ್ನ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ. ತನ್ನ ಮಾಲಕತ್ವದ ಘಟಕದಲ್ಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಅವರು ಅಸ್ವಸ್ಥರಾದಾಗ ಆಸ್ಪತ್ರೆಗೆ ಕೊಂಡೊಯ್ಯದೇ ಶಿವಪ್ಪನವರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಮಾನವೀಯವಾಗಿ ಪಿಕ್ ಅಪ್ ವಾಹನದ ಹಿಂಭಾಗದಲ್ಲಿ ಮರದ ದಿಮ್ಮಿಗಳ ಮೇಲೆ ಮಲಗಿಸಿಕೊಂಡು ಮನೆಯ ಬಳಿಯೇ ಎಳೆದು ಹಾಕಿ ಹೋಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.

 

 

ಇನ್ನು ಘಟನೆಗೆ ಸಂಬಂಧಿಸಿ ಸ್ಟ್ಯಾನ್ಲಿ ಎಂಬಾತನನ್ನ ಬಂಧಿಸಿದ್ದಾರೆ. ಆದ್ರೆ ಪ್ರಮುಖ ಆರೋಪಿ ಹೆನ್ರಿ ತಾವ್ರೋ ಅವರನ್ನ ಬಂಧಿಸಲಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ. ಹೆನ್ರಿಯನ್ನ ಬಂಧಿಸದೇ ಇರುವ ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯ ವೈಖರಿ ಬಗ್ಗೆ ಅನುಮಾನವಿದೆ. ಇದರ ಹಿಂದೆ ರಾಜಕೀಯ ಒತ್ತಡವಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. 

 

ಇನ್ನು ಹೆನ್ರಿ ತಾವ್ರೋ ಅವರನ್ನ ಇಂದು ಸಂಜೆಯೊಳಗಡೆ ಬಂಧಿಸದೇ ಇದ್ದಲ್ಲಿ, ನಾಳೆ ಪುತ್ತೂರು ನಗರ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ರು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement