Published
4 weeks agoon
By
Akkare Newsಮೂಡ ಮತ್ತು ವಖ್ಫ್ ವಿಚಾರದಲ್ಲಿ ಸುಳ್ಳು ಅಪ ಪ್ರಚಾರದ ಅಭಿಯಾನ ನಡೆಸಿ ರಾಜ್ಯಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾಗಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯರವರ ಇಮೇಜ್ ನ್ನು ಹಾಳು ಮಾಡಲು ಯತ್ನಿಸಿರುವ ಬಿಜೆಪಿಯವರಿಗೆ ಈ ಮೂರು ಚುನಾವಣೆಯ ಫಲಿತಾಂಶವು ಕಪಾಲ ಮೋಕ್ಷ ಮಾಡಿದಂತೆ ಆಗಿದೆ, ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿಯವರು ಹೇಳಿದರು.
ಬಡವರ ಹಾಗೂ ಜನ ಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದ ಗ್ಯಾರಂಟಿ ಯೋಜನೆಯೇ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಮೂಲ ಕಾರಣ ಎಂದ ಆಲಿ ಯವರು ಇನ್ನೂ ಮುಂದೆಯಾದರು ಬಿಜೆಪಿಯವರು ಸುಳ್ಳುಗಳ ನೆಲೆಗಟ್ಟಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಸತ್ಯದ ಮೇಲೆ ರಾಜಕಾರಣ ಮಾಡಿ ರಾಜಧರ್ಮವನ್ನು ಉಳಿಸಿ ಕೊಳ್ಳಲಿ ಎಂದ ಆಲಿ ಯವರು ಈ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತುಉಪ ಮುಖ್ಯಮಂತ್ರಿ ಡಿ ಕೆ ಶಿವ ಕುಮಾರ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.