ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಚುನಾವಣೆ

ಉಪಚುನಾವಣೆ : ಮೂರು ಕಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಲುಗೈ ಸರಕಾರದ ಗ್ಯಾರಂಟಿ ಯೋಜನೆ ಡಿಕೆಶಿಯವರ ಸಾರಥ್ಯಕ್ಕೆ ಮತದಾರರ ಒಲವು

Published

on

ಕರ್ನಾಟಕ ಮೂರು ಕ್ಷೇತ್ರಗಳ ಉಪ ಚುನಾವಣೆಯ ಮತಎಣಿಕೆ ಭರದಿಂದ ಸಾಗುತ್ತಿದ್ದು, ಸದ್ಯದ ಟ್ರೆಂಡಿಂಗ್ ಪ್ರಕಾರ, ಎಲ್ಲಾ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದೆ. ಇನ್ನೂ, 9-10 ರೌಂಡ್ ಮತಎಣಿಕೆ ಬಾಕಿಯಿದೆ.

 

 

 

ಬೆಂಗಳೂರು : ಕರ್ನಾಟಕ ಮೂರು ಕ್ಷೇತ್ರಗಳ ಉಪ ಚುನಾವಣೆಯ ಮತಎಣಿಕೆ ಭರದಿಂದ ಸಾಗುತ್ತಿದ್ದು, ಸದ್ಯದ ಟ್ರೆಂಡಿಂಗ್ ಪ್ರಕಾರ, ಎಲ್ಲಾ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದೆ. ಇನ್ನೂ, 9-10 ರೌಂಡ್ ಮತಎಣಿಕೆ ಬಾಕಿಯಿದೆ.

ಸಂಡೂರಿನಲ್ಲಿ 15 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 8,239 ಮತಗಳ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ 78, 277 ಮತ್ತು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ 70,038 ಮತಗಳು ಬಿದ್ದಿವೆ.

 

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭಾರೀ ಅಂತರವನ್ನು ಕಾಯ್ದುಕೊಂಡಿದ್ದಾರೆ. 10ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ‌. 19,793 ಮತಗಳ ಅಂತರದಿಂದ ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ.

 

 

 

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ – 61,265, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ – 41,472 ಮತಗಳನ್ನು ಪಡೆದಿದ್ದಾರೆ. ಆ ಮೂಲಕ, ಚುನಾವಣಾ ರಾಜಕೀಯದಲ್ಲಿ ಗೆಲುವು ಸಾಧಿಸಬೇಕು ಎನ್ನುವ ನಿಖಿಲ್ ಕುಮಾರಸ್ವಾಮಿ ಕನಸು, ನನಸಾಗುತ್ತೋ ಇಲ್ಲವೋ ಎನ್ನುವ ಸಂಶಯ ಎದುರಾಗಿದೆ.

 

ಶಿಗ್ಗಾಂವಿಯಲ್ಲಿ 12ನೇ ಸುತ್ತಿನ ಮತಎಣಿಕೆಯ ನಂತರ, ಕಾಂಗ್ರೆಸ್ಸಿನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಮುನ್ನಡೆಯನ್ನು ಸಾಧಿಸಿದ್ದಾರೆ. ಬಿಜೆಪಿಯ ಭರತ ಬೊಮ್ಮಾಯಿ 60,055 ಮತ್ತು ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ್ 72,306 ಮತಗಳನ್ನು ಪಡೆದಿದ್ದಾರೆ.

ಆ ಮೂಲಕ, ಇದುವರೆಗಿನ ಮತಎಣಿಕೆ ಸಾಗುತ್ತಿರುವ ದಾರಿಯನ್ನು ನೋಡಿದರೆ, ಬಿಜೆಪಿ – ಜೆಡಿಎಸ್ ಮೈತ್ರಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ. ಆ ಮೂಲಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಸೋಲಿನ ಭೀತಿ ಎದುರಾಗಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement