Published
4 weeks agoon
By
Akkare Newsಬಂಟ್ವಾಳ : ನಮ್ಮತನವನ್ನು ನಾವು ಬೆಲೆಸಿಕೊಳ್ಳುವುದರೊಂದಿಗೆ ಧಾರ್ಮಿಕ ಆಚರಣೆ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಬಂಟ್ವಾಳ ನಿವೃತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಆರ್ ಕಂಬಳಿ ಹೇಳಿದರು.
ಅವರು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿ (ರಿ.) ಕಲ್ಲಡ್ಕ ವತಿಯಿಂದ ಶನಿವಾರ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾ ಶಿವ ಕ್ಷೇತ್ರದ ಸನ್ಮತಿ ಭವನದಲ್ಲಿ ಜರಗಿದ 5 ನೇ ವರ್ಷದ ಸಾರ್ವಜನಿಕ ಶ್ರೀ ಶನೇಶ್ವರ ಪೂಜಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ಪ್ರತಿಯೊಬ್ಬ ಮಹಿಳೆಯಲ್ಲೂ ಒಂದೊಂದು ರೀತಿಯ ಕಲಾ ಶಕ್ತಿ ಅಡಗಿದೆ ಅದನ್ನು ಗುರುತಿಸುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮೀನಾಕ್ಷಿ ಆರ್ ಪೂಜಾರಿ ವಹಿಸಿದ್ದರು.
ವೇದಿಕೆಯಲ್ಲಿ ಮಂಡಳಿಯ ಗೌರವ ಅದ್ಯೆಕ್ಷೆ ಡಾ. ಕಮಲ ಪ್ರಭಾಕರ ಭಟ್, ಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷ ಲಕ್ಷ್ಮಿ ಪ್ರಭು, ಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅದ್ಯೆಕ್ಷೆ ಹಿರಣ್ಮಯಿ ಮೊದಲದವ್ರು ಉಪಸ್ಥಿತರಿದ್ದರು.
ಬಾಲಕೃಷ್ಣ ಭಟ್ ಪೌರೋಹಿತ್ಯದಲ್ಲಿ ಶ್ರೀ ಶನೇಶ್ವರ ಪೂಜೆ ಜರಗಿತು.
ಕಾರ್ಯಕ್ರಮದಲ್ಲಿ ಪುತ್ತೂರು ವಿದ್ಯಾವರ್ಧಕದ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾ ಶಿವ ಕ್ಷೇತ್ರದ ಅಧ್ಯಕ್ಷರಾದ ಈಶ್ವರ ಭಟ್ ರಾಕೋಡಿ,ಶ್ರೀ ಶಾರದಾ ಪ್ರತಿಷ್ಠಾನ ಕಲ್ಲಡ್ಕದ ಅಧ್ಯಕ್ಷರಾದ ಯತಿನ್ ಕುಮಾರ್, ಕಾರ್ಯದರ್ಶಿ ವಜ್ರನಾಥ್ ಕಲ್ಲಡ್ಕ,ಶ್ರೀ ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಪೂಜಾರಿ, ಕಲ್ಲಡ್ಕ ರೈತರ ಸೇವಾ ಬ್ಯಾಂಕಿನ ನಿರ್ದೇಶಕರುಗಳಾದ ಲೋಕನಾಥ್ ಏಳ್ತೀಮಾರ್, ಜಯರಾಮರೈ ಕಲ್ಲಡ್ಕ, ಮೊದಲಾದವರು ಉಪಸ್ಥಿತರಿದ್ದರು.
ವಿಜಯ ಪ್ರಕಾಶ್ ಪ್ರಾರ್ಥಿಸಿ, ಸಂಘದ ಕೋಶಾಧಿಕಾರಿ ಯಮುನಾ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ವಿದ್ಯಾ ಗುಣಾಕರ ವಂದಿಸಿದರು. ಲಖಿತಾ ಆರ್ ಶೆಟ್ಟಿ ಹಾಗೂ ರೇಣುಕಾ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.