Published
4 weeks agoon
By
Akkare Newsಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವಿಷ್ಣು ಸೇವಾ ಸಮಿತಿಯಿಂದ ಕೃತಜ್ಞತಾ ಸಭೆ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ನಕ್ಷತ್ರಿತ್ತಾಯ, ಪ್ರಧಾನ ಅರ್ಚಕ ಸುರೇಶ್ ಕುಮಾರ್, ಮಾಜಿ ಅಧ್ಯಕ್ಷರುಗಳಾದ ರವೀಂದ್ರನಾಥ ರೈ ಬಳ್ಳಮಜಲು, ಸತೀಶ್‍ರೈ ಕುಂಬ್ರ, ವಿಷ್ಣು ಸೇವಾ ಸಮಿತಿ ಗೌರವಾಧ್ಯಕ್ಷ ಶಿವರಾಮ ಆಳ್ವ, ಪ್ರಧಾನ ಕಾರ್ಯದರ್ಶಿ ತಿರುಮಲೇಶ್ವರ ಭಟ್, ಖಜಾಂಚಿ ಅರವಿಂದ ಭಗವಾನ್ ದಾಸ್ ರೈ, ಕಾರ್ಯದರ್ಶಿ ಶ್ರೀಕೃಷ್ಣ ಬೊಳಂತಿಮಾರು, ಭಜನಾ ಮಂಡಳಿ ಸದಸ್ಯರಾದ ನವೀನ ಕುರಿಯ, ಜಿತೇಶ್, ಪ್ರೀತಂ, ವಿನಯ ಅಂಗಿತ್ತಾಯ, ಆನಂದ ನಾಯ್ಕ ಉಳ್ಳಾಲ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಬೈರಾಜೆ ಭಂಡಾರಿ, ಜಯಶೀಲ ರೈ, ಅರುಣ ಸಿ. ರೈ, ಅರುಣ ಗಣೇಶ್‍ರೈ, ಧನರಾಜ್ ಆಲೇಕಿ, ಜಯರಾಮ ರೈ, ಕಾರ್ಯದರ್ಶಿ ಶಶಿಧರ ಕಿನ್ನುಮಜಲು, ಸದಸ್ಯರಾದ ಶೀನಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಹಿರಿಯರಾದ ರಾಧಾಕೃಷ್ಣ ಬೂಡಿಯಾರ್, ಬಾಲಚಂದ್ರ ರೈ ಕುರಿಯಗುತ್ತು, ಪುಷ್ಪರಾಜ್‍ರೈ, ರಮೇಶ್‍ರೈ ಡಿಂಬ್ರಿ, ಪುರುಷೋತ್ತಮ ಗೌಡ, ಸಂಕಪ್ಪ, ಗಣೇಶ್‍ರೈ ಬಳ್ಳಮಜಲು, ಹರೀಶ್ ಡಿಂಬ್ರಿ, ಸುಂದರ ಬೊಳಂತಿಮಾರು, ದಿನೇಶ್‍ಬೊಳಂತಿಮಾರು, ಸತೀಶ ಬೊಳಂತಿಮಾರು, ಕುಸುಮಾ ಸುಂದರ, ಉಮೇಶ್ ನಾಯ್ಕ, ಚಿದಾನಂದ ಬೂಡಿಯಾರು, ರಾಧಾಕೃಷ್ಣ ಕುರಿಯ, ಉಮೇಶ ನಾಯ್ಕ ಉಳ್ಳಾಲ, ರಚನಾ, ವಿಷ್ಣು ಅಡಿಗ ಉಪಸ್ಥಿತರಿದ್ದರು. ಊರಿನ ಭಕ್ತಾದಿಗಳು ಸಹಕರಿಸಿದರು.