Published
4 weeks agoon
By
Akkare Newsಮಹಾರಾಷ್ಟ್ರ : ಜುನ್ನಾರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 7 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಶರದ್ ಸೋನವಾನೆ ಎಂಬುವವರನ್ನು ಮುಂಬೈ ಗೆ ಕರೆತರಲು ಸ್ವತಃ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೆಲಿಕಾಪ್ಟರ್ ಕಳುಹಿಸಿಕೊಟ್ಟಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುತ್ತಿದ್ದಂತೆ ಜುನ್ನಾರ್ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಬಂದಿಳಿದಿದೆ. ಈ ಸಂದರ್ಭದಲ್ಲಿ ನೆರೆದಿದ್ದ ಜನ ಕ್ಷಣ ಕಾಲ ಹೌಹಾರಿದ್ದಾರೆ. ಆನಂತರ ಶರದ್ ಸೋನವಾನೆ ಹೆಲಿಕಾಪ್ಟರ್ ಹತ್ತಿ ಮುಂಬೈ ತೆರಳಿದ್ದು ನಂತರ ಏಕನಾಥ ಶಿಂಧೆ ಅವರನ್ನು ಭೇಟಿ ಮಾಡಿದ್ದಾರೆ.
2014 ರಲ್ಲಿ ಎನ್ ಸಿ ಪಿ ಯಿಂದ ಸ್ಪರ್ಧಿಸಿ ಶರದ್ ಶಾಸಕರಾಗಿದ್ದರು. ನಂತರ ಶಿವಸೇನೆ ಬೆಂಬಲಿಸಿದ್ದ ಅವರು 2019 ರಲ್ಲಿ ಶಾಸಕ ಅತುಲ್ ಬೆಂಕೆ ವಿರುದ್ಧ ಸೋಲು ಅನುಭವಿಸಿದ್ದರು. ಈ ಸಲ ಎನ್ ಸಿಪಿ ಶರದ್ ಹಾಗೂ ಅಜಿತ್ ಪವಾರ್ ಗುಂಪಿನ ವಿರುದ್ಧ ಸ್ಪರ್ಧಿಸಿ ಪಕ್ಷೇತರರಾಗಿ ಸ್ಪರ್ಧಿಸಿ ಈಗ ಶಿಂಧೆ ಬಣ ಸೇರಿದ್ದಾರೆ.