Published
4 weeks agoon
By
Akkare Newsಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಇಚಿಲಂಪಾಡಿ* ಇದರ ಶ್ರೀ ನಾರಾಯಣ ಗುರು ಮಂದಿರಕ್ಕೆ ತೆರಳುವ ರಸ್ತೆಯ ನಾಮಫಲಕವನ್ನು ಸಂಘದ ಸ್ಥಾಪಕ ಸದಸ್ಯರಾದ ದಿll ನಾರಾಯಣ ಪೂಜಾರಿ ಪೊಯ್ಯೆತ್ತಡ್ಡ ಇವರ ಸವಿನೆನಪಿನಲ್ಲಿ ಒದಗಿಸಲಾಯಿತು. ಇದರ ಅನಾವರಣ ಕಾರ್ಯಕ್ರಮವು ದಿನಾಂಕ 24/11/2024 ನೇ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಸಂಘದ ಗೌರವಾಧ್ಯಕ್ಷರಾದ ಶ್ರೀ ಇಂದ್ರ ಪೂಜಾರಿ ಬದನೆ ಇವರ ದಿವ್ಯ ಹಸ್ತದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ನಿಡ್ಯಡ್ಕ ಉಪಸ್ಥಿತರಿದ್ದರು. ಹಾಗೆಯೆ ಸಮಾಜದ ಹಿರಿಯರಾದ ಜಾನಪ್ಪ ಪೂಜಾರಿ ಪಟ್ಟೆಗುಡ್ಡೆ, ನಾರಾಯಣ ಪೂಜಾರಿ ಬರೆಮೇಲು ಮತ್ತು ಊರ ಪ್ರಮುಖರಾದ ಉದಯ ಕುಮಾರ್ ಶೆಟ್ಟಿ ಹೊಸಮನೆ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು. ಗೌರವಾಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿ ನಾಮಫಲಕದ ಕೊಡುಗೆ ನೀಡಿದ ಶ್ರೀ ದೇವಿಪ್ರಸಾದ್ ಪೊಯ್ಯೆತ್ತಡ್ಡ ಇವರನ್ನು ಅಭಿನಂದಿಸಿದರು.