Published
4 weeks agoon
By
Akkare NewsCPIM 24ನೇ ದ.ಕ.ಜಿಲ್ಲಾ ಸಮ್ಮೇಳನವು ಇತ್ತೀಚಿಗೆ ಮೂರು ದಿನಗಳ ಕಾಲ ಮಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಸಮ್ಮೇಳನಕ್ಕೆ ಮಾರ್ಗದರ್ಶಕರಾಗಿ CPIM ಪೋಲಿಟ್ ಬ್ಯೂರೋ ಸದಸ್ಯರಾದ ಎಂ.ಎ ಬೇಬಿ, CPIM ರಾಜ್ಯ ಕಾರ್ಯದರ್ಶಿ ಬಸವರಾಜ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೆ.ಪ್ರಕಾಶ್ ರವರು ಭಾಗವಹಿಸಿದ್ದರು. ಸಮ್ಮೇಳನದ ಉದ್ಘಾಟನಾ ಸಮಾರಂಭ, ಪ್ರತಿನಿಧಿ ಅಧಿವೇಶನ, ಸಮಾರೋಪ ಸಮಾರಂಭ, ಆಕರ್ಷಕ ಮೆರವಣಿಗೆ ಹಾಗೂ ಬಹಿರಂಗ ಸಭೆಯು ಅಚ್ಚುಕಟ್ಟಾಗಿ ನಡೆಯಿತು. ಈ ಸಮ್ಮೇಳನವು ಮುಂಬರುವ ಮೂರು ವರ್ಷಗಳ ಕಾಲಾವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು.
ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಮುನೀರ್ ಕಾಟಿಪಳ್ಳರವರು ಸರ್ವಾನುಮತದಿಂದ ಆಯ್ಕೆಗೊಂಡರೆ, ಜಿಲ್ಲಾ ಕಾರ್ಯದರ್ಶಿ ಮಂಡಳಿಗೆ ಕೆ.ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಡಾ.ಕ್ರಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೋಟ್ಟು, ವಸಂತ ಆಚಾರಿ, ಸದಾಶಿವದಾಸ್, ಬಿ ಎಂ ಭಟ್, ಜಯಂತಿ ಶೆಟ್ಟಿಯವರು ಆಯ್ಕೆಯಾದರು.
ನೂತನ ಜಿಲ್ಲಾ ಸಮಿತಿ ಸದಸ್ಯರಾಗಿ ಜಯಂತ ನಾಯ್ಕ್, ರಮಣಿ ಮೂಡಬಿದ್ರೆ, ಯೋಗೀಶ್ ಜಪ್ಪಿನಮೊಗರು, ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ವಸಂತಿ ಕುಪ್ಪೆಪದವು, ರಫೀಕ್ ಹರೇಕಳ, ಪ್ರಮೀಳಾ ಶಕ್ತಿನಗರ, ರಾಧಾ ಮೂಡಬಿದ್ರೆ, ಈಶ್ವರೀ ಬೆಳ್ತಂಗಡಿಯವರನ್ನು ಆರಿಸಲಾಯಿತು. ನೂತನ ಜಿಲ್ಲಾ ಸಮಿತಿಗೆ ಶೇಖರ್ ಕುಂದರ್ ಕುತ್ತಾರ್ ರವರು ಖಾಯಂ ಆಹ್ವಾನಿತರಾಗಿ ಆಯ್ಕೆಗೊಂಡರೆ, ಜೆ ಬಾಲಕ್ರಷ್ಣ ಶೆಟ್ಟಿಯವರನ್ನು ವಿಶೇಷ ಆಹ್ವಾನಿತರನ್ನಾಗಿ ಆಯ್ಕೆಗೊಳಿಸಲಾಯಿತು.