Published
4 weeks agoon
By
Akkare Newsಪುತ್ತೂರು: ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಪುತ್ತೂರಿನಲ್ಲಿ ಶಿಕ್ಷಣ ತಜ್ಞರಾಗಿ ಚಿರಪರಿಚಿತರಾಗಿದ್ದ ಕೋಟಿಯಪ್ಪ ಪೂಜಾರಿ ನ.25ರಂದು ಬೆಳಗ್ಗೆ ಬೊಳುವಾರಿನ ಬಾಡಿಗೆ ಮನೆಯೊಂದರಲ್ಲಿ ನಿಧನರಾಗಿದ್ದಾರೆ.
ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದ ಕೋಟಿಯಪ್ಪ ಪೂಜಾರಿ ಅವರು ಪುತ್ತೂರು ಬೊಳುವಾರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಪ್ರತಿ ದಿನ ಪುತ್ತೂರು ಕೊಂಬೆಟ್ಟು ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ವಿವಿಧ ಶಿಕ್ಷಣ ಚಟುವಟಿಕೆಗಳಿಗೆ ಪ್ರಾಯೋಜಕರಾಗಿ ಪ್ರೋತ್ಸಾಹ ನೀಡುತ್ತಿದ್ದರು. ನ.25ರಂದು ಅವರು ಮನೆಯಲ್ಲಿ ನಿಧನರಾಗಿದ್ದಾರೆ.