Published
4 weeks agoon
By
Akkare Newsಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ..ಗುಟ್ಟು… ರಟ್ಟು..!!!
ಮಂಗಳೂರು ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತರು ರೈಡ್ ನಡೆಸಿದಾಗ ಲೋಕಾಯುಕ್ತ ಅಧಿಕಾರಿಗಳೇ ತಬ್ಬಿಬ್ಬಾಗಿದ್ದಾರೆ. ಗರಿ ಗರಿ ನೋಟುಗಳು, ಚಿನ್ನದ ಒಡವೆಗಳು ಪತ್ತೆಯಾಗಿವೆ.
ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬಕಾಸುರರ, ಲಂಚಕೋರರ ಸ್ವರ್ಗವಾಗಿ ಮಾರ್ಪಟ್ಟಿದೆ. ಇಲ್ಲಿ ಲಂಚ ಕೊಡದೆ ಯಾವುದೇ ಕೆಲಸ ನಡೆಯಲ್ಲ. ಒಂದು ಪರ್ಮೀಟ್ ಪಡೆಯಲು ಲಕ್ಷಾಂತರ ರೂಪಾಯಿ ಕಪ್ಪ ಕಾಣಿಕೆ ಕೊಡಲೇಬೇಕು. ಆ ಮಟ್ಟಿಗೆ ಹಂಡಾಲೆಬ್ಬಿದೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ.
ಇಲ್ಲಿನ ಅಧಿಕಾರಿಗಳು ಲಂಚ ತಿಂದು ದುಂಡಗಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಲೋಕಾಯುಕ್ತ ಅಧಿಕಾರಿಗಳು ಇಲ್ಲಿನ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಈಗ ಶಾಕ್ ಗೊಳಗಾಗುವ ಸರದಿ ಲೋಕಾಯುಕ್ತ ಅಧಿಕಾರಿಗಳದ್ದು. ಏಕೆಂದರೆ ಕಂತೆ ಕಂತೆ ನೋಟುಗಳು, ಕೆಜಿ ಗಟ್ಟಲೆ ಒಡವೆಗಳು ಪತ್ತೆಯಾಗಿವೆ. ಇವೆಲ್ಲವೂ ಲಂಚದ ಮೂಲಕ ಪಡೆದವುಗಳು. ಇಲ್ಲಿನ ಒಬ್ಬೊಬ್ಬ ಅಧಿಕಾರಿಯೂ ಕೋಟಿಗಟ್ಟಲೆ ತೂಗುವಂತವುಗಳು. ಮರಳು ಮಾಫಿಯಾ, ಅಕ್ರಮ ಧೋ ನಂಬರ್ ದಂಧೆಕೋರರಿಗೆ ಕಡಿವಾಣ ಹಾಕಬೇಕಾದ ಗಣಿ ಇಲಾಖೆ ಅವರ ಜೊತೆನೇ ಕೈ ಜೋಡಿಸಿ ಕೋಟಿ ಕೋಟಿ ಆಸ್ತಿ ಮಾಡಿಟ್ಟಿದ್ದಾರೆ.
ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ. ಕೃಷ್ಣವೇಣಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ಲೋಕಾಯುಕ್ತರು ಶೋಧ ಕಾರ್ಯ ನಡೆಸಿದ್ದರು. ಬೆಂಗಳೂರಿನ ಯಲಹಂಕದ ಫ್ಲಾಟ್, ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ, ಮೂರು ನಿವೇಶನಗಳ ಮೇಲೆ ದಾಳಿ ನಡೆಸಿದ್ದರು.