Published
4 weeks agoon
By
Akkare Newsಪುತ್ತೂರು: ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಮಹಿಳಾ ಘಟಕದ ವತಿಯಿಂದ ತೀಯಾ ದೀಪಾವಳಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.
ಜೆ ಪಿ ಸಂತೋಷ್ ಕುಮಾರ್ ಮುರ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಯತೀಂದ್ರನಾಥ್ ಹಾಗೂ ಯುಪಿ ರಾಜೇಶ್ (ಹಿಮ) ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜವಾಬ್ದಾರಿಗಳನ್ನು ನಿರ್ವಹಿಸುವುದರ ಬಗ್ಗೆ ನೂತನ ಪದಾಧಿಕಾರಿಗಳು ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮುಕ್ರಂಪಾಡಿ , ಕೋಶಾಧಿಕಾರಿ ಬಿಎಂ ಶ್ರೀಧರ್ ಮಹಿಳಾ ಘಟಕದ ಅಧ್ಯಕ್ಷರಾದ ವಿ ಪ್ರಭಾವತಿ, ಕಾರ್ಯದರ್ಶಿ ಅಶ್ವಿನಿ ರಾಜೇಶ್ ಉಪಸ್ಥಿತರಿದ್ದರು.
ದೀಪಾವಳಿ ಸಂಭ್ರಮವನ್ನು ವಿವಿಧ ರೀತಿಯ ಮನೋರಂಜನಾ ಸ್ಪರ್ಧೆಗಳನ್ನು ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ, ಹಾಗೂ ದಂಪತಿಗಳಿಗೆ, ಆಯೋಜಿಸಿ ವಿಜೇತರಿಗೆ, ಬಹುಮಾನ ವಿತರಿಸಲಾಯಿತು.ಸಹನ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ದಯಾನಂದ ಮುರ ಸ್ವಾಗತಿಸಿದರು. ಮಹಿಳಾ ಘಟಕದ ಜೊತೆ ಕಾರ್ಯದರ್ಶಿ ಸುಶ್ಮಿತಾ ದೀಪಕ್ ನಿರೂಪಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಕೇಪುಳು ನಿರ್ವಹಿಸಿದರು.