Published
3 weeks agoon
By
Akkare Newsಪುತ್ತೂರು: ಹೊರ ಜಿಲ್ಲೆಗಳಿಂದ ಬಂದ ಜೆಸಿಬಿ ಮಾಲಕರು, ಆಪರೇಟರ್ ಗಳು ಹಾಗೂ ಸ್ಥಳೀಯ ಜೆಸಿಬಿ ಮಾಲಕರ ನಡುವೆ ಗೊಂದಲವಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಸಂಜೆಯೊಳಗೆ ಸಭೆ ಕರೆದು ಗೊಂದಲ ಪರಿಹರಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ ಜೆಸಿಬಿ, ಹಿಟಾಚಿ ಮಾಲಕರ ಅಸೋಸಿಯೇಶನ್‍ನವರು ಈ ಕುರಿತು ಶುಕ್ರವಾರ ಶಾಸಕರಿಗೆ ಮನವಿ ನೀಡಿ, ಇದಕ್ಕೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಮೊದಲಿಗೆ ಜೆಸಿಬಿ ಮಾಲಕರ ಅಸೋಸಿಯೇಶನ್ ನವರು ಈ ಕುರಿತು ಚರ್ಚಿಸಿ ಒಂದು ದರ ನಿಗದಿ ಮಾಡಿ. ಬಳಿಕ ಸೋಮವಾರ ಸಂಜೆಯೊಳಗೆ ಹೊರ ಜಿಲ್ಲೆಯ ಜೆಸಿಬಿ ಮಾಲಕರು, ಆಪರೇಟರ್ ಹಾಗೂ ಸ್ಥಳೀಯ ತಾಲೂಕಿನ ಅಸೋಸಿಯೇಶನ್ ನವರನ್ನು ಸೇರಿಸಿ ಗೊಂದಲಕ್ಕೆ ಪರಿಹಾರ ನೀಡುವ. ಒಟ್ಟಾರೆಯಾಗಿ ಎರಡೂ ಕಡೆಯವರಿಗೆ ಯಾವುದೇ ಅನ್ಯಾಯ ಆಗಬಾರದು ಎಂದು ತಿಳಿಸಿದರು.