Published
3 weeks agoon
By
Akkare Newsಪುತ್ತೂರು; ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗೆ ಜಾಗದ ಜೊತೆಗೆ ಒಂದು ಕೋಟಿ ರೂ ಅನುದಾನವೂಮಂಜೂರಾಗಿದೆ. ಮಂಗಳೀರಿನಲ್ಲಿನಡೆದ ಪೊಲೀಸ್ ವಸತಿ ಗೃಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಘೋಷಿಸಿದ್ದಾರೆ.
ಕಾರ್ಯಕ್ರಮದಲ್ಲಿಭಾಗವಹಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಅವರು ವೇದಿಕೆಯಲ್ಲಿ ಸಚಿವರಿಗೆ ಮಹಿಳಾ ಪೊಲೀಸ್ ಠಾಣೆಯ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ ಸರಕಾರದಿಂದ ಅನುಮತಿಮತ್ತು ಹೊಸ ಕಟ್ಟಡಕ್ಕೆ ಅನುದಾನವನ್ನೂ ನೀಡಬೇಕು ಎಂದು ಶಾಸಕ ಅಶೋಕ್ ರೈ ಮನವಿಮಾಡಿದ್ದಾರೆ.ಮನವಿಗೆ ತಕ್ಷಣ ಸ್ಪಂದಿಸಿದಸಚಿವರು ಮಹಿಳಾ ಪೊಲೀಸ್ ಠಾಣೆಗೆ ಜಾಗದ ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ ಅನುದಾನವನ್ನು ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ.