Published
3 weeks agoon
By
Akkare Newsಪುತ್ತೂರು: ಮೊನ್ನೆ ನಡೆದ ಗ್ರಾಪಂ ಉಪಚುನಾವಣಾ ಪಲಿತಾಂಶದ ಬಗ್ಗೆ ಮುಖ್ಯಂತ್ರಿಗಳು ನನ್ನ ಜೊತೆ ಮಾತನಾಡಿ ಮೂರಕ್ಕೆ ಮೂರು ಗೆದ್ದಿದ್ದೇವೆ ಎಂದುನನ್ನಲ್ಲಿ ಪಲಿತಾಂಶ ಹಂಚಿಕೊಂಡದ್ದು ನನಗೆ ಅಚ್ಚರಿ ಮೂಡಿಸಿಧ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಪಂ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ” ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ. ಭೇಟಿಯಾಗಿ ಮಾತುಕತೆ ನಡೆಸಿ ನಾನು ಮತ್ತು ಗೃಹ ಸಚಿವರು ಜೊತೆಯಾಗಿ ಸಿ ಎಂ ಅವರ ಜೊತೆ ಬರುತ್ತಿರುವಾಗ ಏಯ್ ರೈ ನಿನ್ನ ಕ್ಷೇತ್ರದಲ್ಲಿ ನಡೆದ ಗ್ರಾಪಂ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರವನ್ನು ಗೆದ್ದು ಬಂದಿದ್ದೀರ ಶಹಬ್ಬಾಸ್ ಎಂದು ಹೇಳಿದ್ದಾರೆ.
ಸ್ವತ ಮುಖ್ಯಮಂತ್ರಿಗಳೇ ಗ್ರಾಪಂ ಚುನಾವಣಾ ಪಲಿತಾಂಶದ ಬಗ್ಗೆ ನನ್ನಲ್ಲಿ ವಿಚಾರಿಸಿದ್ದನ್ನು ಕೇಳಿ ನನಗೆ ಅಚ್ಚರಿಯಾಗಿದೆ ಎಂದ ಶಾಸಕರು ಗ್ರಾಪಂ ಪಲುತಾಂಶದ ವಿಚಾರ ಸಿ ಎಂ ರಿಗೂ ತಲುಪಿದೆ. ಇದು ಪಕ್ಷದ ಕಾರ್ಯಕರ್ತರಿಗೆ ಸಿಗುವ ಗೌರವವಾಗಿದೆ ಎಂದು ಹೇಳಿದರು.