Published
3 weeks agoon
By
Akkare Newsಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿಯಲ್ಲಿ ನ.25 ರಂದು ಮುಂದಿನ ಮೂರು ವರ್ಷದ ಅವಧಿಗೆ ಹೊಸ ಎಸ್.ಡಿ.ಎಂ.ಸಿ ರಚನೆಯನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಮಲ್ಲಿಕಾ ಅಶೋಕ್ ಪೂಜಾರಿ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಇವರ ಉಪಸ್ಥಿತಿಯಲ್ಲಿ ಮಾಡಲಾಯಿತು.
ಕೋಡಿಂಬಾಡಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಅಶ್ರಫ್ ಹಾಗೂ ಶಾಲಾ ಮುಖ್ಯಗುರುಗಳಾದ ಬಾಲಕೃಷ್ಣ ಎನ್. ರವರು ಎಸ್.ಡಿ.ಎಂ.ಸಿ ರಚನೆ ಕುರಿತು ಮಾಹಿತಿ ನೀಡಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಹದಿನೆಂಟು ಜನ ನೂತನ ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಶೇಖರ ಪೂಜಾರಿಯವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸ್ಫೂರ್ತಿ ರೈ ಆಯ್ಕೆಯಾದರು.
ಸದಸ್ಯರುಗಳಾಗಿ ಗೀತಾ, ಲಲಿತ, ಸುನಂದಾ, ಸುಂದರ, ಲಕ್ಷ್ಮೀ, ಯಶೋಧ, ವಿದ್ಯಾ, ಖೈರುನ್ನೀಸಾ, ಯತೀಶ್ ಶೆಟ್ಟಿ, ಚಿತ್ರಾ, ಲಕ್ಷ್ಮೀಶ, ರತ್ನಾಕರ ಪ್ರಭು, ವಾಸುದೇವ, ಕರುಣಾಕರ, ಸೌಮ್ಯ ಹಾಗೂ ಜಯರಾಮ ಆಯ್ಕೆಯಾದರು.
ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಹಾಜರಿದ್ದು, ನೂತನ ಎಸ್.ಡಿ.ಎಂ.ಸಿ ರಚನೆಯು ಯಶಸ್ವಿಯಾಗುವಲ್ಲಿ ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.