ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪ ಕಾಡಾನೆ ಓಡಾಟ

Published

on

ಕುಕ್ಕೆ ಸುಬ್ರಹ್ಮಣ್ಯ ಡಿಸೆಂಬರ್ 01: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ನಡುವೆ ದೇವಸ್ಥಾನ ಸಮೀಪ ಕಾಡಾನೆಯೊಂದು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.

 

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾಮಹೋತ್ಸವ ನಡೆಯುತ್ತಿದೆ. ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಈ ನಡುವ ಕಾಡಾನೆಯೊಂದು ಕುಕ್ಕೆ ಸುಬ್ರಹ್ಮಣ್ಯ ದ ದೇವಸ್ಥಾನದ ಪಕ್ಕದಲ್ಲೇ ತಿರುಗಾಟ ನಡೆಸಿದೆ. ಸಂಪುಟ ನರಸಿಂಹ ಮಠದ ಬಳಿ ಆನೆ ಓಡಾಡಿದೆ.

 

ಈ ವೇಳೆ ದೇವಸ್ಥಾನದ ಆನೆ ಎಂದು ಭಕ್ತರು ಕಾಡಾನೆ ಮುಟ್ಟಲು ಮುಂದಾಗಿದ್ದು, ಕಂಡು ಬಂದಿದೆ. ಜಾತ್ರೆಯ ಸಂದರ್ಭ ಕಾಡಾನೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಬೆಳಕು ಮತ್ತು ಬ್ಯಾಂಡ್ ಸದ್ದಿಗೆ ಕಾಡಾನೆ ದಿಕ್ಕು ಪಾಲಾಗಿ ಓಡಾಡುತ್ತಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement