Published
3 weeks agoon
By
Akkare Newsಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅವರು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ಹಾಸನ ಮೂಲದ ಸಕಲೇಶಪುರದ ನಟಿ ಶೋಭಿತಾ ಗಾಳಿಪಟ, ಮಂಗಳಗೌರಿ, ಕೋಗಿಲೆ, ಬ್ರಹ್ಮಗಂಟು, ಕೃಷ್ಣ ರುಕ್ಮಿಣಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು ಮತ್ತು ಮನೆದೇವರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ನಿನ್ನಿಂದಲೇ, ಬ್ರಹ್ಮಗಂಟು ಧಾರಾವಾಹಿಗಳು ಅವರಿಗೆ ಬಹಳಷ್ಟು ಹೆಸರು ತಂದು ಕೊಟ್ಟಿತ್ತು.
ಎರಡೊಂದ್ಲಾ ಮೂರು, ಎಟಿಎಮ್ , ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಅಪಾರ್ಟ್‌ಮಂಟ್ ಟು ಮರ್ಡರ್, ವಂದನಾ ಸಿನಿಮಾದಲ್ಲಿ ನಟಿಸಿದ್ದರು.
ಕಳೆದ ಎರಡುವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಮದುವೆಯಾಗಿ ಸೆಟಲ್ ಆಗಿದ್ದರು. ಇನ್ನು ಶೋಭಿತಾ ಆ*ತ್ಮಹ*ತ್ಯೆಗೆ ಕಾರಣ ಗೊತ್ತಾಗಿಲ್ಲ.