Published
3 weeks agoon
By
Akkare Newsಬೆಂಗಳೂರು:ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್ ಅವರನ್ನು ಕರ್ನಾಟಕ ಸರ್ಕಾರದ ಹೆಚ್ಚುವರಿ ಜನರಲ್ ಅಡ್ವೋಕೇಟ್ ಆಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ
ಕರ್ನಾಟಕ ರಾಜ್ಯಪಾಲರಾದ ತಾವರೆ ಚಂದ್ ಗೆಹ್ಲೋಟ್ ಅವರ ಆದೇಶದನ್ವಯ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್ ಅವರನ್ನು ಅಡ್ವೋಕೇಟ್ ಜನರಲ್ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ
ದಿವಂಗತ ಕೆ ಅಬ್ದುಲ್ ರಹಿಮಾನ್ ಮತ್ತು ನೆಬಿಸ ದಂಪತಿ ಪುತ್ರ ರಾಗಿರುವ ಇವರು ಎಸ್ ಡಿ ಎಂ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ. ಮಾಜಿ ಅಡ್ವೊಕೇಟ್ ಜನರಲ್ ಬಿ ವಿ ಆಚಾರ್ಯ ಅವರ ಬಳಿ ವಕೀಲರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಇವರು ಹಿರಿಯ ವಕೀಲರಾಗಿದ್ದಾರೆ