Published
3 weeks agoon
By
Akkare Newsಬೆಂಗಳೂರು: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 2024ರ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಪ್ ಡಿಸೆಂಬರ್ 6 ರಿಂದ 8ರವರೆಗೆ “ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತೀಯ ಕುಸ್ತಿ ಸಂಘವು 2024ರ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಪ್ ಅನ್ನು ಈ ಬಾರಿ ಕರ್ನಾಟಕದಲ್ಲಿ ಆಯೋಜಿಸಲು ಅನುಮತಿಯನ್ನು ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಅದರಂತೆ ಕರ್ನಾಟಕ ಕುಸ್ತಿ ಸಂಘ(ರಿ)ದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರ ನೇತೃತ್ವದಲ್ಲಿ, ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್ 06/12/2024 ರಿಂದ 08/12/2024ರವರೆಗೆ ಆಯೋಜಿಸಿದ್ದು, ಈ ಕುಸ್ತಿ ಕ್ರೀಡಾಕೂಟದಲ್ಲಿ ಪ್ಯಾರೀಸ್ ಒಲಂಪಿಕ್‌ನಲ್ಲಿ ಕಂಚಿನ ಪದಕ ವಿಜೇತರಾದ ಅಮನ್ ಸೆಹ್ರಾವತ್, ವಿಶ್ವ ಕುಸ್ತಿ ಚಾಂಪಿಯನ್ ಶಿಪ್‌ಗಳಲ್ಲಿ ಭಾಗವಹಿಸಿರುವ 250ಕ್ಕೂ ಹೆಚ್ಚು ಕುಸ್ತಿಪಟುಗಳ ಜೊತೆಯಲ್ಲಿ ನಮ್ಮ ಕರ್ನಾಟಕದ ಕುಸ್ತಿಪಟುಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅತ್ಯುತ್ತಮ ಕುಸ್ತಿಪಟುಗಳು ಭಾಗವಹಿಸುತ್ತಿದ್ದಾರೆ. ವಿಜೇತರಿಗೆ ಪ್ರತಿಷ್ಠಿತ ಕುಸ್ತಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಈ ಚಾಂಪಿಯನ್ ಶಿಪ್ ಮುಖ್ಯ ವೇದಿಕೆಯಾಗಲಿದೆ.
ಡಿಸೆಂಬರ್ 6 ರಿಂದ 8ರವರೆಗೆ ಮೂರು ದಿನಗಳ ಕಾಲ ನಡೆಯುವ 2024ರ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು, ಭಾರತೀಯ ಕುಸ್ತಿ ಸಂಘ(ರಿ)ದ ಮುಖ್ಯಸ್ಥರು, ಚಿತ್ರರಂಗದ ತಾರೆಯರು, ಅಂತರಾಷ್ಟ್ರೀಯ ಕುಸ್ತಿಪಟುಗಳು ಸೇರಿದಂತೆ ರಾಜ್ಯದ ಗಣ್ಯಾತಿಗಣ್ಯ ವ್ಯಕ್ತಿಗಳು ಹಾಗೂ ಕ್ರೀಡಾ ಅಭಿಮಾನಿಗಳು ಆಗಮಿಸುತ್ತಿದ್ದು, ಈ ಕುಸ್ತಿ ಕ್ರೀಡಾಕೂಟದಲ್ಲಿ ತಮ್ಮ ಉಪಸ್ಥಿತಿ ನಮಗೆ ಬಹು ಮುಖ್ಯವಾಗಿರುವುದರಿಂದ ತಾವುಗಳು ತಮ್ಮ ಕುಟುಂಬ ಸಮೇತರಾಗಿ ಆಗಮಸಿ ತಮ್ಮ ಹೆಚ್ಚಿನ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಕುಸ್ತಿ ಸಂಘ(ರಿ.) ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಿವಾಸ್ ತಿಳಿಸಿದ್ದಾರೆ.