ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

KSRTC’ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಜ್ಯದ ಎಲ್ಲಾ ಬಸ್ ಗಳಲ್ಲೂ `QR’ ಕೋಡ್ ಟಿಕೆಟ್ ಲಭ್ಯ.!

Published

on

ಇಷ್ಟು ದಿನ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಜನರು ನಗದು ಹಣ ನೀಡಿ ಟಿಕೆಟ್ ಪಡೆಯುತ್ತಿದ್ದರು. ಈ ವೇಳೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ವಿಷಯವಾಗಿ ಗಲಾಟೆ ನಡೆಯುತ್ತಿತ್ತು. ಆದರೆ ಇದೀಗ ಪ್ರಯಾಣಿಕರ ಬೇಡಿಕೆಯಂತೆ ಕೆಎಸ್‌ಆರ್ಟಿಸಿಯು ಇನ್ನು ಮುಂದೆ ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪೇ ಮಾಡಿ ಟಿಕೆಟ್ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.

ಹೌದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಂತೆ ಇದೀಗ KSRTC ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ, ದುಡ್ಡು ಕೊಟ್ಟು ಚಿಲ್ಲರೆ ವಿಚಾರವಾಗಿ ಕಂಡಕ್ಟರ್ ಜೊತೆಗೆ ಸಣ್ಣಪುಟ್ಟ ಕಿರಿಕ್ ಆಗುತ್ತಿದ್ದವು. ಆದರೆ ಇದೀಗ ಆ ಚಿಂತೆ ಬಿಟ್ಟುಬಿಡಿ. ಡೈನಮಿಕ್ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ರಾಜ್ಯದ 8800 ಬಸ್ಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ
ಆನ್ಲೈನ್ ಹಣ ಸಂದಾಯ ಮಾಡುವ ಆಪ್ ಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಭೀಮ್ ಆಪ್ ಮೂಲಕ ಹಣ ಪಾವತಿಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಎಟಿಎಂ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಗಳಲ್ಲೂ ಹಣ ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement