Published
2 weeks agoon
By
Akkare Newsಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಪ್ರಮಾಣದ ಮಳೆ ಡಿ.05ರ ಸಂಜೆ ಬಂದಿದ್ದು ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರು ಸಂಕಷ್ಟಕ್ಕೆ ಬಿದ್ದಿದ್ದಾರೆ.
ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಅಂಗಡಿಯವರು ಬಾಡಿಗೆ ನೆಲೆಯಲ್ಲಿ ಸ್ಥಳ ಪಡೆದಿದ್ದಾರೆ. ಇಂದು ಸುಮಾರು ಎರಡು ಗಂಟೆಗಳ ಕಾಲ ಮಳೆ ಬಂದ ಕಾರಣ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಕೆಲ ಅಂಗಡಿಗಳಲ್ಲಿ ನೀರು ನಿಂತಿದೆ. ಸೆಟ್ ಮಾಡಿದ ಆಟಿಕೆಗಳನ್ನು ಮತ್ತೆ ಮುಚ್ಚಿ ಇಡಬೇಕಾದ ಪರಿಸ್ಥಿತಿ ಬಂದಿದೆ.
ಕೆಲ ವಸ್ತುಗಳು ನೀರಿನಲ್ಲಿ ಒದ್ದೆಯಾಗಿರುವುದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ ಅಂಗಡಿಗಳು ಸಂಕಷ್ಟಕ್ಕೆ ಬಿದ್ದಿವೆ. ಅಂಗಡಿ ಸುತ್ತ, ಅಥವಾ ಅಂಗಡಿಯ ಅಡಿ ಭಾಗಕ್ಕೆ ಸಣ್ಣ ಜಲ್ಲಿ ಸುರಿದಾದರು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.