Published
3 weeks agoon
By
Akkare Newsಮತ್ತೂರು: ಜನಸಂಘದಲ್ಲಿ ಕೆಲಸ ಮಾಡಿ, ಆ ಬಳಿಕ ಹಿಂದೂ ಸಂಘಟನೆ ಹಗೂ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡಿದ ಮಹಿಳೆಯೋರ್ವರು ತಾನು ಬೀದಿಗೆ ಬಿದ್ದಿದ್ದೇನೆ ನನಗೆ ಯಾರೂ ಇಲ್ಲ, ಆಶ್ರಮದಲ್ಲಿ ಪಿಜಿಯಲ್ಲಿದ್ದೇನೆ, ನನಗೆ ಏನಾದರೂ ಸಹಾಯ ಮಾಡಿ ಎಂದು ಪುತ್ತೂರು ನಿವಾಸಿ ಭಾರತಿ ಪಿ ಎಸ್ ಕಾಮತ್‌ರವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದಾರೆ. ಭಾರತಿ ಪಿ ಎಸ್ ರವರು ತನ್ನ ಸಹೋದರ ಪ್ರತಾಪ್ ಎಮಬವರ ಜೊತೆ ಸೇರಿ ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡಿದವರು.೮೦ ರ ದಶಕದಲ್ಲಿ ಪುತ್ತೂರು, ಮಡಿಕೇರಿ, ವಿರಾಜಪೇಟೆ, ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡಿಕೊಂಡವರು, ಮಡಿಕೇರಿ ಆಸುಪಾಸಿನಲ್ಲಿ ಜನಸಂಘ, ರಾಷ್ಟ್ರ ಸೇವಿಕಾ ಸಮಿತಿ, ಹಿಂದೂ ಪರಿಷತ್ ಸಂಘಟನೆಗಳಲ್ಲಿ ತೊಡಗಿಸಿಕೊಂಡು ೧೯೭೬ರ ತುರ್ತು ಪರಿಸ್ತಿತಿ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಹೋರಾಡಿ ಕಾರಗೃಹ ವಾಸ ಅನುಭವಿಸಿದ್ದರು.
ಅ ಬಳಿಕ ಎಲ್ಲವನ್ನೂ ಕಳೆದುಕೊಂಡು ೦೯೯೫ ರಲ್ಲಿ ಪುತ್ತೂರಿನಲ್ಲಿ ಹಲವು ಹಿಂದೂ ಸಮಘಟನೆಗಳಲ್ಲಿ, ಮಹಿಳಾ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರಿನ ಶಾಸಕರಾಗಿದ್ದ ರಾಮಭಟ್ಟರು ಇವರಿಗೆ ರೋಟರಿ ಮುಲಕ ಸಣ್ಣ ಮನೆಯೊಂದನ್ನು ನಿರ್ಮಾ ಮಾಡಿಕೊಟ್ಟಿದ್ದರು. ಇವರ ಪುತ್ರ ೨೫ ವರ್ಷ ಪ್ರಾಯವಾಗುವ ವೇಳೆ ಮೃತಪಟ್ಟಿದ್ದರು. ಸದ್ಯ ಮುರದಲ್ಲಿ ಶಿವಸದನ ವೃದ್ಧಾಶ್ರಮದಲ್ಲಿ ಇದ್ದಾರೆ. ಇವರ ರೂಮಿನ ೩00೦ ವೆಚ್ಚವನ್ನು ಮೈಸೂರಿನ ಜಿಎಸ್‌ಬಿ ಸಭಾಧವರು ಪಾವತಿ ಮಾಡುತ್ತಿದ್ದಾರೆ.
ಶಾಸಕ ಅಶೋಕ್ ರೈ ಬಳಿನೆರವಿಗೆ ಮನವಿ
ವೃದ್ಧ ಭಾರತಿ ಪಿ ಎಸ್ ರವರು ಪುತ್ತೂರು ಶಾಸಕ ಅಶೋಕ್ ರೈ ಕಚೇರಿಗೆ ಬಂದು ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾರೆ. ನನಗೆ ಈಗ ಯಾರೂ ಇಲ್ಲ ತಾನು ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿದ್ದೇನೆ. ನಾನು ಕೆಲಸ ಮಾಡಿದ ಸಂಘಟನೆಯವರು, ಪಕ್ಷದವರು ನನ್ನ ನೆರವಿಗೆ ಬಂದಿಲ್ಲ. ನೀವು ನನಗೆ ಸಹಾಯ ಮಾಡಬೇಕು. ನೀವು ನೊಂದವರಿಗೆ ಸಹಾಯ ಮಾಡುತ್ತೀರಿ ಎಂಬ ವಿಷಯ ತಿಳಿದು ಬಂದಿದ್ದೇನೆ, ನನ್ನನ್ನು ವಾಪಸ್ ಕಳಿಸಬೇಡಿ, ನಾನು ತುಂಬಾ ಸಂಕಷ್ಟದಲ್ಲಿದ್ದೇನೆ. ಈ ಹಿಂದೆ ನಾನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಬಳಿ ಹೋಗಿದ್ದೆ, ಮಾಜಿ ಶಾಸಕ ಸಂಜೀವ ಮಠಂದೂರು ಬಳಿಯೂ ಹೋಗಿದ್ದೇನೆ ಎಂದು ಶಾಸಕ ಅಶೋಕ್ ರೈ ಅವರಲ್ಲಿ ತಿಳಿಸಿದ ಭಾರತಿ ಅವರು ನನಗೆ ಸಹಾಯ ಮಾಡದೇ ಇದ್ದರೆ ನಾನು ಬದುಕುವುದೇ ಕಷ್ಟಕರವಾಗಿದೆ. ಸಕ್ಕರೆ ಇದ್ದಾಗ ಇರುವೆಗಳು ಮುತ್ತಿಕೊಂಡಿದ್ದವು ಈಗ ಯಾವ ಇರುವೆಗಳೂ ಇಲ್ಲ ಎಂದು ಶಾಸಕರ ಮುಂದೆ ಕಣ್ಣೀರು ಹಾಕಿದರು.
ನಾನು ಸಹಾಯ ಮಾಡುತ್ತೇನೆ; ಅಶೋಕ್ ರೈ
ನಿಮ್ಮ ಕಷ್ಟಕ್ಕೆ ನಾನು ಸ್ಪಂದಿಸುತ್ತೇನೆ. ಹಿಂದೆ ಏನಾಗಿತ್ತೋ ನನಗೆ ಗೊತ್ತಿಲ್ಲ. ನನ್ನ ಕಚೇರಿಗೆ ನೀವು ಸಹಾಯ ಕೇಳಿ ಬಂದಿದ್ದೀರಿ ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಮಹಿಳೆಗೆ ಸಾಂತ್ವನ ಹೇಳಿದರು.