Published
2 weeks agoon
By
Akkare Newsಪುತ್ತೂರು: ಡಿ.06.ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಉನ್ನತ ಪ್ರಾಥಮಿಕ ಶಾಲೆ ಹಿಂಭಾಗದ ಚರಂಡಿಯಲ್ಲಿ ಮಲಿನ ನೀರು ಹರಿದು ಹೋಗುತ್ತಿದ್ದು ದುರ್ನಾಥ ಬೀರುತ್ತಿದೆ. ಕೆಲವು ಕಡೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗು ನಂತಹ ಜ್ವರ ಬಂದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಮತ್ತು ಶಿಕ್ಷಕರಿಗೆ ಸರಿಯಾಗಿ ಪಾಠ ಮಾಡಲು ಬಹಳ ತೊಂದರೆಯಾಗುತ್ತಿದೆ ಈ ಸಂಬಂಧ ಇಂದು ಸಹಾಯಕ ಆಯುಕ್ತರು ಉಪ್ಪಿನಂಗಡಿ ಶಾಲೆಗೆ ಭೇಟಿ ನೀಡಿ ಈ ಸಮಸ್ಯೆ ಸಂಪೂರ್ಣವಾಗಿ ಪರಿಹರಿಸಬೇಕು ಕೊಳಚೆ ನೀರು ನಿಲ್ಲದೆ ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡುವಂತೆ, ಡೈನೇಜ್ ಸ್ಕ್ಯಾಬ್ ಮತ್ತು ಇಂಗು ಗುಂಡಿ ನಿರ್ಮಿಸುವಂತೆ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೊಹಪಾತ್ರ ರವರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೂರು ದಿನಗಳ ಕಾಲವಕಾಶದೊಳಗೆ ಸಮಸ್ಯೆ ಪರಿಹಾರವಾಗದೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸುವ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಕೆಲ ಕಾಲ ಕಳೆದರು.
ಈ ಸಂದರ್ಭದಲ್ಲಿ ಎಸ್.ಡಿಎಂ.ಸಿ ಅಧ್ಯಕ್ಷರಾದ ಅಬ್ದುಲ್ ಮಜೀದ್, ಖ್ಯಾತ ವೈದ್ಯರಾದ ಡಾ. ರಾಜಾರಾಮ್ ಕೆ.ಬಿ. ಭೂನ್ಯಾಯ ಮಂಡಳಿ ಸದಸ್ಯರಾದ ಅಬ್ದುಲ್ ರಹಿಮಾನ್ ಯುನಿಕ್, ವರ್ತಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಡಿಕೋತ್ಸ, ಎಸ್.ಡಿಎಂಸಿ ಉಪಾಧ್ಯಕ್ಷರಾದ ಶೀಲ, ಸದಸ್ಯರಾದ ಕಲಂದರ್ ಶಾಫಿ ನೆಕ್ಕಿಲಾಡಿ,ಫಾರೂಕ್ ಝಿಂದಗಿ,ಮುಸ್ತಫಾ ನೆಕ್ಕಿಲಾಡಿ ಹಾಗೂ ಹಮೀದ್ pt,ನಾಗೇಶ್,ತೌಸೀಫ್ ut,ರಶೀದ್ ಮಠ,ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.