Published
2 weeks agoon
By
Akkare Newsಬೆದ್ರಾಳ-ಕೊರಜಿಮಜಲು ಎಲಿಕಾ ಎಂಬಲ್ಲಿ ನೂತನ ನವೀಕೃತ ಆರೂಢ ಮತ್ತು ದೈವಸ್ಥಾನದಲ್ಲಿ ಶ್ರೀ ನಾಗ ಮತ್ತು ಶ್ರೀ ರಕ್ತೇಶ್ವರೀ ಸಪರಿವಾರ ದೈವಗಳ ಪುನ:ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಡಿ.23, ಸೋಮವಾರದಂದು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಮತ್ತು ವೇದಮೂರ್ತಿ ಕೆಮ್ಮಿಂಜೆ ಶ್ರೀ ವೆಂಕಟಕೃಷ್ಣ ಕಲ್ಲೂರಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿರುವುದು.
ಪುತೂರು : ಇಲ್ಲಿನ ಬೆದ್ರಾಳ-ಕೊರಜಿಮಜಲು ಎಲಿಕಾ ಎಂಬಲ್ಲಿ ನೂತನ ನವೀಕೃತ ಆರೂಢ ಮತ್ತು ದೈವಸ್ಥಾನದಲ್ಲಿ ಶ್ರೀ ನಾಗ ಮತ್ತು ಶ್ರೀ ರಕ್ತೇಶ್ವರೀ ಸಪರಿವಾರ ದೈವಗಳ ಪುನ:ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಡಿ.23, ಸೋಮವಾರದಂದು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಮತ್ತು ವೇದಮೂರ್ತಿ ಕೆಮ್ಮಿಂಜೆ ಶ್ರೀ ವೆಂಕಟಕೃಷ್ಣ ಕಲ್ಲೂರಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿರುವುದು.
ಡಿ. 22 ಆದಿತ್ಯವಾರದಂದು ಸಂಜೆ ಗಂಟೆ 5ಕ್ಕೆ ತಂತ್ರಿಗಳು ಆಗಮಿಸಲಿದ್ದು, ಬಳಿಕೆ ಸಂಜೆ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ವಿಶ್ವಕರ್ಮ ಪ್ರಾರ್ಥನೆ, ಶಿಲ್ಪಿಗಳ ಬೀಳ್ಕೊಡುಗೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ದುರ್ಗಾನಮಸ್ಕಾರ ಪೂಜೆ, ನೂತನ ಬಿಂಬ ಶುದ್ದಿ, ಮೃತ್ತಿಕಾಧಿವಾಸ, ಜಲಾಧಿವಾಸ, ಧ್ಯಾನಾಧಿವಾಸ, ಮಹಾಪೂಜೆ, ಪ್ರಾರ್ಥನೆ, ಶೈಯ್ಯಾಧಿವಾಸ ಮುಂತಾದ ವೈದಿಕ ಕಾರ್ಯಕ್ರಮಗಳು ನೆರವೇರಲಿರುವುದು
ಡಿ. 23 ಸೋಮವಾರದಂದು ಪ್ರಾತಃಕಾಲ 7ರಿಂದ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹವನ, ಪವಮಾನ ಸೂಕ್ತಾದಿ ಪ್ರಾಯಶ್ಚಿತ್ತ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಬ್ರಹ್ಮಕಲಶ ಪ್ರತಿಷ್ಠೆ ನೆರವೇರಲಿರುವುದು.
ಬಳಿಕ ಬೆಳಗ್ಗೆ 9.18ರ ನಂತರ ಒದಗುವ ಮಕರ ಲಗ್ನ ಸುಮುಹೂರ್ತದಲ್ಲಿ ನಾಗ ಮತ್ತು ರಕೇಶ್ವರೀ ಸಪರಿವಾರ ಧರ್ಮದೈವಗಳ ಪುನಃಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ನಿರ್ಣಯ ಪ್ರಾರ್ಥನೆ, ಪಂಚಾಮೃತಾಭಿಷೇಕ ಸರ್ವಪ್ರಾಯಶ್ಚಿತ್ತ ಆಶ್ಲೇಷ ಬಲಿ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ವಟು ಬ್ರಾಹ್ಮಣ, ಸುವಾಸಿನಿ ಆರಾಧನೆ, ಪ್ರಸಾದ ವಿತರಣೆ ನೆರವೇರಲಿರುವುದು.
ಮಧ್ಯಾಹ್ನ 1 ಘಂಟೆಗೆ ಅನ್ನಸಂತರ್ಪಣೆ ನೆರವೇರಲಿರುವುದು ಎಂದು ಶ್ರೀ ನಾಗ ರಕ್ತೇಶ್ವರೀ ಸೇವಾ ಪ್ರತಿಷ್ಠಾನದ ಸಂಚಾಲಕರು ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ