ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕಡಬ-ಪಂಜ ರಸ್ತೆಯಲ್ಲಿ ಮರಣಗುಂಡಿಗಳು: ಹೊಂಡ ತುಂಬಿದ ರಸ್ತೆಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದ ಕಾರ್ಮಿಕರನ್ನು ತರಾಟಗೆ ತೆಗೆದುಕೊಂಡ ಸಾರ್ವಜನಿಕರು

Published

on

ಕಡಬ- ಪಂಜ ರಸ್ತೆ ಗುಂಡಿಗಳಿಗೆ ತೇಪೆ ಕಾರ್ಯ

ಕಡಬ: ಕಡಬ- ಪಂಜ ಪ್ರಮುಖ ಜಿಲ್ಲಾ ರಸ್ತೆಯಲ್ಲಿ ಮರಣ ಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರು ನಿತ್ಯ ಪರದಾಟ ಮಾಡುತ್ತಿದ್ದರು. ವಾಹನಗಳು ರಸ್ತೆ ಗುಂಡಿಗೆ ಬಿದ್ದು ಅಪಘಾತಗಳೂ ಸಂಭವಿಸಿತ್ತು. ಇದೀಗ ರಸ್ತೆಯ ಗುಂಡಿಗಳಿಗೆ ಡಾಮಾರು ಹಾಕಿ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದು ಸ್ಥಳದಲ್ಲಿ ಬರೇ ಕಾರ್ಮಿಕರು ಅರೆ ಬರೆ ಕೆಲಸ ಮಾಡುತ್ತಿರುವುದಾಗಿ ಆರೋಪಿಸಿ ಆ ಭಾಗದ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಡಿ. 12 ರಂದು ಕಲ್ಲಂತಡ್ಕ ಬಳಿ ನಡೆದಿದೆ.

 

ಗುಂಡಿಗಳಿಗೆ ಡಾಮಾರು ಹಾಕಿ ಮುಚ್ಚುವ ನೆಪದಲ್ಲಿ ಕಳಪೆ ತೇಪೆ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳಕ್ಕೆ ಗುತ್ತಿಗೆದಾರರು ಮತ್ತು ಇಂಜಿನಿಯರ್ ಬಂದ ಬಳಿಕವೇ ಸಮರ್ಪಕ ಕಾಮಗಾರಿ ನಡೆಸುವಂತೆ ಸ್ಥಳದಲ್ಲಿದ್ದವರಿಗೆ ಸಾರ್ವಜನಿಕರು ತಾಕೀತು ಮಾಡಿದರು. ವಾಹನ ಮಾಲೀಕರು ರಸ್ತೆ ತೆರಿಗೆ ಕಟ್ಟಿ ವಾಹನ ಓಡಿಸುತ್ತಿದ್ದರೂ ವಾಹನದಿಂದ ಬಿದ್ದು ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತವಾಯಿತು.ಅಲ್ಲದೆ ರಸ್ತೆ ಗುಂಡಿಗೆ ಹಾಕಿರುವ ಜಲ್ಲಿಯನ್ನು ಕಾಲಿನಲ್ಲಿ ತುಳಿದು ನೋಡಿದಾಗ ಸರಿಯಾಗಿ ಡಾಮಾರು ಹಾಕದಿರುವುದನ್ನು ಗಮನಿಸಿದ ಆಕ್ರೋಶಿತರು ಅಧಿಕಾರಿಗಳು ಸ್ಥಳಕ್ಕೆ ಬಂದ ಬಳಿಕವೇ ಕಲಸ ನಿರ್ವಹಿಸಲು ಪಟ್ಟು ಹಿಡಿದರು.

ಮಾದ್ಯಮ ವರದಿಯ ಹಿನ್ನಲೆ ಆರಂಭದಲ್ಲಿ ಜಲ್ಲಿ ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುವ ಯತ್ನ ಮಾಡಲಾಗಿತ್ತು.ಬಳಿಕ ಹಲವು ತಿಂಗಳಾದರೂ ಗುಂಡಿ ಮುಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ.ಇದೀಗ ಕಡಬ ಆಸ್ಪತ್ರೆ ಬಳಿ, ಕೆಇಬಿ ಬಳಿ, ಪೆಟ್ರೋಲ್ ಪಂಪ್ ನಿಲ್ದಾಣ ದ ಬಳಿ ರಸ್ತೆಯಲ್ಲಿ ಭಾರೀ ಪ್ರಮಾಣದ ಹೊಂಡಗಳಿದ್ದರೂ ಕಲ್ಲಂತಡ್ಕ ಬಳಿ ಸಣ್ಣ ಗುಂಡಿಗಳನ್ನು ಕಾರ್ಮಿಕರು ಮುಚ್ಚುತ್ತಿದ್ದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾಹನ ಸವಾರರು, ಸಾರ್ವಜನಿಕರು ಅಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

ಈ ಬಗ್ಗೆ ಮಾತನಾಡಿದ ತಾ.ಪಂ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಅವರು ದೂರವಾಣಿ ಮೂಲಕ ಇಂಜಿಯರ್ ಅವರ ಗಮನಕ್ಕೆ ತರಲಾಗಿದೆ. ಅರೆ ಬರೆ ಕೆಲಸ ಮಾಡಲು ನಾವು ಬಿಡುವುದಿಲ್ಲ . ಸಮರ್ಪಕವಾಗಿ ಬಾಳಿಕೆ ಬರುವ ರೀತಿಯಲ್ಲಿ ಗುಂಡಿಗಳನ್ನು ಮುಚ್ಚುವ ಜೊತೆಗೆ ಡಾಮಾರೀಕರಣವಾಗಬೇಕು. ಸಾರ್ವಜನಿಕರ ಬೇಡಿಕೆ ಈಡೇರಿಸಲು ಅಧಿಕಾರಿಗಳು ವಿಫಲರಾದರೆ ರಸ್ತೆ ತಡೆದು ಅಹೋರಾತ್ರಿ ಧರಣಿಗೂ ಸಿದ್ದ ಎಂದಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement