Published
1 week agoon
By
Akkare Newsಪುತ್ತೂರು : ನವೆಂಬರ್ 6ರಂದು ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ 1 ಮತ್ತು 2ನೇ ಆರೋಪಿಗಳಾದ ಚೇತನ್ ಅಲಿಯಾಸ್ ಪುಂಡಿ ಚೇತು ಹಾಗೂ ಮನೀಷ್ ಅಲಿಯಾಸ್ ಬ್ರೋಕರ್ ಮನಿ ಪರ ಪುತ್ತೂರಿನ ಪ್ರತಿಷ್ಟಿತ ನ್ಯಾಯವಾದಿ ನರಸಿಂಹ ಪ್ರಸಾದ್ ಮಾನ್ಯ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಾದ ವಿದಾದ ನಡೆದು ಇದೀಗ ಮಾನ್ಯ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿ ಅರ್ಜಿಯನ್ನು ತಿರಸ್ಕೃತಗೊಳಿಸಿದೆ.
ನೊಂದ ದೂರುದಾರರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಗೊಂಡ ಖ್ಯಾತ ನ್ಯಾಯವಾದಿಗಳಾದ ಮಹೇಶ್ ಕಜೆ ಸಮರ್ಥವಾಗಿ ವಾದಮಂಡಿಸಿದ್ದರು.
ಸುಧೀರ್ಘ ವಾದ – ಪ್ರತಿವಾದ :
ತುಳು ಸಂಸ್ಕೃತಿಯ ಆರಾಧಕ, ಯೋಧ ಸದೃಶ ವ್ಯಕ್ತಿತ್ವದ ಕಲ್ಲೇಗ ಟೈಗರ್ಸ್ ಟೀಂನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಭೀಕರ ಕೊಲೆ ಪುತ್ತೂರಿಗರನ್ನು ಬೆಚ್ಚಿಬೀಸಿತ್ತು. ಚೇತನ್ ಮತ್ತು ಮನೀಶ್ ಟೀಂ ಸೇರಿ ಮಾಡಿದ್ದ ಕೊಲೆ ಮತ್ತು ಅಕ್ಷಯ್ ಕಲ್ಲೇಗರ ಮೈಮೇಲೆ ಇದ್ದ ಗಾಯದ ಗುರುತುಗಳು ಆರೋಪಿಗಳ ಕ್ರೌರ್ಯತೆಗೆ ಹಿಡಿದ ಕೈಕನ್ನಡಿಯಾಗಿತ್ತು. ಅಲ್ಲದೆ, ಠಾಣೆಗೆ ಕೊಲೆಗೆ ಬಳಸಿದ ತಲ್ವಾರ್ ಸಹಿತ ಹೋಗಿರುವ ಸಿಸಿ ಟಿವಿ ದೃಶ್ಯಾವಳಿಗಳಂತೂ ಇವರು ಮನುಷ್ಯರೇ..!? ರಾಕ್ಷಸರೇ..!? ಎಂಬಂತೆ ಭಾಸವಾಗುವಂತೆ ಇದ್ದು, ಈ ಎಲ್ಲಾ ಅಂಶಗಳು ನ್ಯಾಯಾಲಯದ ಮುಂದೆ ವಿವಿಧ ಸಾಕ್ಷ್ಯಗಳ ಸಹಿತ ಒಂದೊಂದಾಗಿ ಲಾಯರ್ ಮಹೇಶ್ ಕಜೆ ಲಾ ಪಾಯಿಂಟ್ ಹಾಕಿದ್ದಾರೆ.