Published
1 week agoon
By
Akkare Newsಬೆಳಗಾವಿ: ವಿಧಾನ ಪರಿಷತ್ತಿನ ಕಲಾಪದಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂದು ಎಂಎಲ್‌ಸಿ ಐವನ್ ಡಿಸೋಜ ಅವರು ಧ್ವನಿ ಎತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಗೊಳಪಡುವ ಹೈಕೋರ್ಟ್ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡಬೇಕು ಎಂದು ಐವನ್ ಡಿಸೋಜ ಸದನದ ಗಮನ ಸೆಳೆದು ಸರ್ಕಾರವನ್ನು ಒತ್ತಾಯಿಸಿದರು. ಮಂಗಳೂರಿನಲ್ಲಿ ಒಂದು ಲಕ್ಷದವರೆಗೆ ಕೇಸುಗಳು ಬಾಕಿಯಿವೆ. ಈ ಕೇಸ್‌ಗಳ ಇತ್ಯರ್ಥಕ್ಕೆ ಹೈಕೋರ್ಟ್‌ಗೆ ಹೋಗಬೇಕಾದರೆ 380ಕಿ.ಮೀ. ದೂರ ಬೆಂಗಳೂರಿಗೆ ಹೋಗಬೇಕಾಗುತ್ತದೆ.
ಜನರಿಗೆ ನ್ಯಾಯ ಬಹಳ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮನೆಬಾಗಿಲಿಗೆ ಬರುವಂತಾಗಬೇಕು ಎಂಬುದು ಸರಕಾರದ ನೀತಿ. ನಮ್ಮ ರಾಜ್ಯದಲ್ಲಿ ಮೂರು ಹೈಕೋರ್ಟ್‌ಗಳಿದ್ದು, ಧಾರವಾಡ ಹಾಗೂ ಕಲಬುರಗಿಯಲ್ಲಿ ಎರಡು ವಿಭಾಗೀಯ ಪೀಠಗಳಿವೆ. ಧಾರವಾಡ ಹಾಗೂ ಕಲಬುರಗಿಯಲ್ಲಿ 30 ಸಾವಿರ ಕೇಸ್‌ಗಳಿದ್ದರೆ, ಕರಾವಳಿ ಜಿಲ್ಲೆಗಳಲ್ಲಿ 70ಸಾವಿರ ಕೇಸ್‌ಗಳಿವೆ. ಆದ್ದರಿಂದ ಹೈಕೋರ್ಟ್ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾಗಬೇಕೆಂದು ಐವನ್ ಡಿಸೋಜ ಮನವಿ ಮಾಡಿದರು.