ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪುಷ್ಪ 2 ರಿಲೀಸ್ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ಅರೆಸ್ಟ್

Published

on

ಹೈದರಾಬಾದ್‌: ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪಾ -2 ಸಿನಿಮಾದ ಪ್ರೀಮಿಯರ್ ಶೋ ಸಂದರ್ಭದಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಠಾಣಾ ಪೊಲೀಸರು ನಾಯಕ ನಟ ಅಲ್ಲು ಅರ್ಜುನ್‌ರನ್ನು  ಬಂಧಿಸಿದ್ದಾರೆ.

 

ಡಿ.4ರಂದು ಪುಷ್ಪಾ-2 ಬಿಡುಗಡೆ ಸಂದರ್ಭ ಸಂಧ್ಯಾ ಚಿತ್ರಮಂದಿರದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ರೇವತಿ(39) ಎಂಬ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅವರ ಪುತ್ರ ಶ್ರೀತೇಜ್  ಕೂಡಾ ಗಾಯಗೊಂಡು ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ಕುರಿತು ಈ ಮೊದಲೇ, ಚಿಕ್ಕಡಪಲ್ಲಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ನೊಟೀಸ್‌ಗೆ ಅಲ್ಲು ಅರ್ಜುನ್ ಅವರು ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಅಲ್ಲು ಅರ್ಜುನ್, ಪ್ರಕರಣವನ್ನು ರದ್ದುಗೊಳಿಸುವಂತೆ ತೆಲಂಗಾಣ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ.

ಡಿಸೆಂಬರ್ 4 ರಂದು ರಾತ್ರಿ 9:40 ರ ಸುಮಾರಿಗೆ ಪುಷ್ಪ 2 ಪ್ರೀಮಿಯರ್‌ಗಾಗಿ ಥಿಯೇಟರ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಜಮಾಯಿಸಿದ್ದರು. ಥಿಯೇಟರ್ ಆಡಳಿತವು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲು ಅಥವಾ ಚಲನಚಿತ್ರದ ಕೆಲವು ಪ್ರಮುಖ ನಟರ ಯೋಜಿತ ಪ್ರದರ್ಶನದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ವಿಫಲವಾಗಿತ್ತು. ಇದು ಅವ್ಯವಸ್ಥೆಗೆ ಕಾರಣವಾಯಿತು.

ಸರಿಸುಮಾರು ರಾತ್ರಿ 9:30ಕ್ಕೆ ಅಲ್ಲು ಅರ್ಜುನ್ ತಮ್ಮ ವೈಯಕ್ತಿಕ ಭದ್ರತಾ ತಂಡದೊಂದಿಗೆ ಥಿಯೇಟರ್‌ಗೆ ಆಗಮಿಸಿದರು. ಈ ವೇಳೆ ಅಲ್ಲು ಅರ್ಜುನ್‌ರನ್ನು ನೋಡಲು ಜನರು ಉತ್ಸುಕರಾಗಿದ್ದರು. ಕೆಳಗಿನ ಬಾಲ್ಕನಿ ಪ್ರದೇಶಕ್ಕೆ ಪ್ರವೇಶಿಸಲು ಅವರ ಭದ್ರತಾ ತಂಡವು ಗುಂಪನ್ನು ತಳ್ಳಿತು. ಈ ಅವಾಂತರದಲ್ಲಿ ರೇವತಿ ಮತ್ತು ಅವರ ಪುತ್ರ ಶ್ರೀತೇಜ್ ಸಿಲುಕಿ ಉಸಿರುಗಟ್ಟಿದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಷ್ಟರಲ್ಲಾಗಲೇ ರೇವತಿ ಮೃತಪಟ್ಟಿದ್ದರು. ಆದರೆ ಶ್ರೀತೇಜ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಅಲ್ಲು ಅರ್ಜುನ್, ಮೃತರ ಕುಟುಂಬಕ್ಕೆ ಎಲ್ಲ ರೀತಿಯಿಂದಲೂ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ನನ್ನ ಪರವಾಗಿ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಅಲ್ಲದೆ, ನಮ್ಮ ತಂಡದಿಂದ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಅಲ್ಲು ಅರ್ಜುನ್ ತಿಳಿಸಿದ್ದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement