Published
1 week agoon
By
Akkare Newsಬೆಂಗಳೂರು : ಸಧ್ಯ ರಾಜ್ಯ ಬಿಜೆಪಿಯ ಟ್ರಬಲ್ ಶೂಟರ್ ಜವಾಬ್ದಾರಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೆಗಲಿಗೆ ಬಂದಿದೆ. ಬಣ ರಾಜಕೀಯದಿಂದ ಕಂಗಾಲಾಗಿರುವ ಬಿಜೆಪಿ ನಾಯಕರು ಸಧ್ಯ ಸಾಹುಕಾರ್ ಮೊರೆ ಹೋಗಿದ್ದಾರೆ.
ಹೌದು ಸಧ್ಯ ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ಹಾಗೂ ವಿಜಯೇಂದ್ರ ನಡುವಿನ ಸಮರದಿಂದ ಪಕ್ಷ ಅನೇಕ ಸಲ ಮುಜುಗರ ಪರಿಸ್ಥಿತಿ ಎದುರಿಸುತ್ತಿದೆ. ಇದನ್ನು ಸರಿ ದಾರಿಗೆ ತರುವ ಉದ್ದೇಶದಿಂದ ಸಾಹುಕಾರ್ ಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ಟ್ರಬಲ್ ಶೂಟರ್ ಆಗಿ ಬಾಲಚಂದ್ರ ಜಾರಕಿಹೊಳಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಬಿಜೆಪಿ ಬಣ ಬಡಿದಾಟದ ಜವಾಬ್ದಾರಿ ನೀಡುವ ಕುರಿತು ಮಾತುಕತೆ ನಡೆದಿದೆ. ಮೊನ್ನೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ.
ಅನೇಕ ಶಾಸಕರು ಬಿಜೆಪಿ ಬಣ ಬಡಿದಾಟಕ್ಕೆ ಬ್ರೆಕ್ ಹಾಕಲೂ ಎಲ್ಲವನ್ನೂ ಸರಿ ದಾರಿಗೆ ತರುವ ಉದ್ದೇಶದಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಾತುಕತೆ ನೀಡುವ ಜವಾಬ್ದಾರಿ ನೀಡುವಂತೆ ಎಲ್ಲರೂ ಹೇಳಿದ್ದಾರೆ. ಇದರಿಂದ ಪಕ್ಷಕ್ಕೆ ಲಾಭ ಆಗುತ್ತದೆ ಎಂಬುದು ಅನೇಕರ ಅಭಿಪ್ರಾಯ ಆಗಿದೆ.
ಸಧ್ಯ ವಿಜಯೇಂದ್ರ ಹಾಗೂ ಯತ್ನಾಳ್ ನಡುವಿನ ಜಗಳ ಹೈಕಮಾಂಡ್ ನಾಯಕರಿಗೂ ತಲೆನೋವಾಗಿದೆ. ಇದೇ ಕಾರಣಕ್ಕೆ ಇಬ್ಬರೂ ನಾಯಕರನ್ನು ಮಾತುಕತೆ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಜವಾಬ್ದಾರಿ ಸಾಹುಕಾರ್ ಹೆಗಲಿಗೆ ಬಂದಿದ್ದು ಮುಂದೆ ಯಾವೆಲ್ಲ ಬದಲಾವಣೆ ಆಗುತ್ತದೆ ಎಂದು ಕಾದು ನೋಡಬೇಕು.