ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಬೆಂಗಳೂರು ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ: ಪತ್ನಿ ನಿಕಿತಾ, ಆಕೆಯ ತಾಯಿ-ಸಹೋದರನ ಬಂಧನ

Published

on

ಬೆಂಗಳೂರು: ಉತ್ತರ ಪ್ರದೇಶ ಮೂಲದ 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಅವರ ವಿಚ್ಛೇದಿತ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

 

ನಿಕಿತಾ ಮತ್ತು ಅವರ ಕುಟುಂಬಕ್ಕೆ ಕಿರುಕುಳ ಮತ್ತು ಸುಲಿಗೆ ಆರೋಪದ ನಂತರ ಅತುಲ್ ಆತ್ಮಹತ್ಯೆ ಮಾಡಿಕೊಂಡ ಕೆಲವು ದಿನಗಳ ನಂತರ ಮೂವರ ಬಂಧನವಾಗಿದೆ. ನ್ಯಾಯಾಧೀಶರ ಮೇಲೂ ಅತುಲ್ ಆರೋಪ ಮಾಡಿದ್ದರು.

ನಿಕಿತಾ ಅವರನ್ನು ಗುರುಗ್ರಾಮ್‌ನಲ್ಲಿ ಬಂಧಿಸಿದರೆ, ಆಕೆಯ ತಾಯಿ ಮತ್ತು ಸಹೋದರನನ್ನು ಪ್ರಯಾಗ್‌ರಾಜ್‌ನಲ್ಲಿ ಬಂಧಿಸಲಾಗಿದೆ. ಆಕೆಯ ಚಿಕ್ಕಪ್ಪ ಸುಶೀಲ್ ಕೂಡಾ ಆರೋಪಿಯಾಗಿದ್ದು, ಪರಾರಿಯಾಗಿದ್ದಾರೆ. ಮೂವರು ಆರೋಪಿಗಳನ್ನು ನಿನ್ನೆ ಬಂಧಿಸಿ ತಡರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಸ್ಟಡಿಗೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ದೇಶದಾದ್ಯಂತ ಜನರ ಆಕ್ರೋಶದ ಬಳಿಕ ಪೊಲೀಸರು ಜಾಗರೂಕತೆಯಿಂದ ಬಂಧನಕ್ಕೆ ಮುಂದಾದರು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಬೆಂಗಳೂರು ಪೊಲೀಸರು ಮೂರು ದಿನಗಳೊಳಗೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಿದ್ದರು.

ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ಸದಸ್ಯರು ಅತುಲ್ ಸುಭಾಷ್ ಅವರ ಆತ್ಮಹತ್ಯೆಮತ್ತು ಅವರ ವಿರುದ್ಧ 24 ಪುಟಗಳ ಸೂಸೈಡ್ ನೋಟ್, 80 ನಿಮಿಷಗಳ ವೀಡಿಯೊದಲ್ಲಿ ಮಾಡಿದ ಆರೋಪಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಹಾರದ ಸಮಸ್ತಿಪುರ ಮೂಲದ 34 ವರ್ಷದ ಟೆಕ್ಕಿ ಸೋಮವಾರ ಬೆಂಗಳೂರಿನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

 

2019 ರಲ್ಲಿ ನಿಕಿತಾಳನ್ನು ಮ್ಯಾಚ್‌ಮೇಕಿಂಗ್ ವೆಬ್‌ಸೈಟ್‌ನಲ್ಲಿ ಹುಡುಕಿದ ನಂತರ ವಿವಾಹವಾದೆ ಎಂದು ಸುಭಾಷ್ ತನ್ನ ಡೆತ್‌ನೋಟ್‌ ಮತ್ತು ವೀಡಿಯೊದಲ್ಲಿ ಆರೋಪಿಸಿದ್ದಾರೆ. ನಿಕಿತಾ ಮತ್ತು ಅವರ ಕುಟುಂಬವು ಉದ್ಯಮಗಳನ್ನು ಸ್ಥಾಪಿಸಲು ದೊಡ್ಡ ಮೊತ್ತದ ಹಣವನ್ನು ಕೇಳುತ್ತಿದ್ದರು ಎಂದು ಅವರು ಆರೋಪಿಸಿದ್ದರು. ತಾನು ನಿರಾಕರಿಸಿದಾಗ ವಾದಗಳು ಭುಗಿಲೆದ್ದವು ಮತ್ತು ಅಂತಿಮವಾಗಿ 2021 ರಲ್ಲಿ ನಿಕಿತಾ ತಮ್ಮ ಮಗನೊಂದಿಗೆ ಮನೆ ತೊರೆದಿದ್ದರು ಎಂದು ಸುಭಾಷ್ ಡೆತ್ ನೋಟ್ ನಲ್ಲಿ ಹೇಳಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement