Published
1 week agoon
By
Akkare Newsಆನೆಗಳಿಂದ ಕಾಡಿನಂಚಿನಲ್ಲಿರುವ ಜನರಿಗೆ ತೊಂದರೆ ಆಗುತ್ತಿದ್ದು, ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬೇಡಿಕೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಕಟುವಾಗಿ ಟೀಕಿಸಿದರು.
‘ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಧ್ವನಿಗೂಡಿಸಿದರು.
ಈ ವಿವಾದಾತ್ಮಕ ಹೇಳಿಕೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವಿರೋಧಗಳ ಕೇಳಿ ಬರುತ್ತಿತ್ತು ಇದೀಗ ಕಾಡುಗಳ್ಳ ವೀರಪ್ಪನ್ ಜೊತೆಗೆ ಪೂಂಜಪ್ಪನ್ ಎಂಬ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲಾಗದೊಡಗಿದೆ.