ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಶಾಸಕ ಅಶೋಕ್ ರೈ ಪ್ರಯತ್ನ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ 24 ಕಂಬಳ ಉತ್ಸವಕ್ಕೆ 1.20 ಕೋಟಿ ರೂಪಾಯಿಗಳ ಅನುದಾನ ಮಂಜೂರು

Published

on

ಶಾಸಕ ಅಶೋಕ್ ಕುಮಾರ್ ರೈ ಯವರ ಮನವಿಯಂತೆ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ 24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಒಟ್ಟು 1.20 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲು ಪ್ರವಾಸೋದ್ಯಮ ಸಚಿವರಾದ ಶ್ರೀ ಹೆಚ್ ಕೆ ಪಾಟೀಲ್ ಅವರು ಅದೇಶಿಸಿದ್ದಾರೆ.

 

ತುಳುನಾಡಿನ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ಆರ್ಥಿಕವಾಗಿ ಸರಕಾರದಿಂದ ಪ್ರೋತ್ಸಾಹ ದೊರಕಿರುವುದು ಕಂಬಳ ಕೂಟದ ಆಯೋಜಕರಿಗೆ ಮತ್ತು ಕಂಬಳ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

 

ಮೊನ್ನೆಯಷ್ಟೇ ಸದನದಲ್ಲಿ ಅಶೋಕ್ ಕುಮಾರ್ ರೈ ಯವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಪ್ರತಿ ಕಂಬಳಕ್ಕೆ 5 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಅಗ್ರಹಿಸಿದ್ದರು.

 

ಶಾಸಕ ಅಶೋಕ್ ಕುಮಾರ್ ರೈ ಯವರ ಮನವಿಗೆ ಸ್ಪಂದಿಸಿದ ಸರಕಾರ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದೆ.

ಅಧಿವೇಶನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಪ್ರತೀ ಕಂಬಳ ಉತ್ಸವಕ್ಕೆ ತಲಾ 5 ಲಕ್ಷದಂತೆ ಬಿಡುಗಡೆ ಮಾಡಬೇಕೆಂದು ಸರಕಾರದ ಗಮನ ಸೆಳೆಯಲಾಗಿತ್ತು. ಮನವಿಗೆ ಸ್ಪಂದಿಸಿದ ಸರಕಾರದ ಪ್ರವಾಸೋದ್ಯಮ ಸಚಿವರು ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲು ಅದೇಶಿಸಿದ್ದಾರೆ. ಎಲ್ಲಾ ಕಂಬಳ ಆಯೋಜಕರ ಮತ್ತು ಅಭಿಮಾನಿಗಳ ಪರವಾಗಿ ಸರಕಾರಕ್ಕೆ ಧನ್ಯವಾದಗಳು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement