Published
3 days agoon
By
Akkare Newsಬಂಟ್ವಾಳ: ಪೋಷಕರು ತಮ್ಮ ಮಕ್ಕಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಕುಟುಂಬದ ಜೊತೆ, ಸ್ನೇಹಿತರ ಜೊತೆ ಪಾರ್ಟಿ, ಡಿನ್ನರ್ ಎಂದು ಭರ್ಜರಿಯಾಗಿ ಆಚರಿಸಿಕೊಳ್ಳೋದು ಈಗಿನ ಕಾಲದ ಟ್ರೆಂಡ್. ಆದರೆ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ಗೌತಮ್ ಪೂಜಾರಿ ನೆಲ್ಲಿಗುಡ್ಡೆಯವರು ಮಾದರಿಯಾಗಿ ತಮ್ಮ ಮಗಳ ಜನುಮ ದಿನವನ್ನು ಆಚರಿಸಿದ್ದಾರೆ.
ಅನುಗ್ರಹ ಸೇವಾ ಟ್ರಸ್ಟ್ ವೃದ್ರಾಶ್ರಮದಲ್ಲಿ ಬಹಳ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿ, ಆಶ್ರಮಕ್ಕೆ 25 ಕೆ.ಜಿ ಅಕ್ಕಿ ಹಾಗೂ ದಿನ ಸಾಮಗ್ರಿ ವಸ್ತುಗಳನ್ನು ನೀಡಿದ್ದಾರೆ. ಈ ಮೂಲಕ ತಮ್ಮ ಮಗಳಾದ ಶ್ರೇಷ್ಠ ಅವರ ಒಂದನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್.ಜಿ ಬೆಳ್ತಂಗಡಿ, ಜಯಸ್ಮಿತಾ ಅವರು ಜೊತೆಗಿದ್ದರು.