Published
13 hours agoon
By
Akkare Newsಪುತ್ತೂರು : ಡಿ.21.ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ ದಿನಾಂಕ 21/12/24 ರಂದು ಪ್ರತಿಭಾ ದಿನಾಚರಣೆಯನ್ನು ಆಚರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರು , ಮುಖ್ಯ ಅಭ್ಯಾಗತರಾದ ಶ್ರೀ ಜಯರಾಮ ರೈ ಮಿತ್ರoಪಾಡಿ, ಪೋಷಕರು ಹಾಗೂ ಅಧ್ಯಕ್ಷರು ಶ್ರೀ ದೇವತಾ ಸಮಿತಿ ಶ್ರೀ ಕ್ಷೇತ್ರ ದೇವಗಿರಿ ತಿಂಗಳಾಡಿ, ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಜಯಮಾಲಾ ವಿ. ಎನ್, ಸದಸ್ಯರಾದ ಶ್ರೀ ಪ್ರಸನ್ನ ಭಟ್,
ಶ್ರೀ ಹರೀಶ್ ಪುತ್ತೂರಾಯರು ಹಾಗೂ ಶ್ರೀ ದಯಾನಂದ ಸಂಚಾಲಕರು ಶ್ರೀ ಸತ್ಯಸಾಯಿ ಪುತ್ತೂರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕರು ಮಾತನಾಡುತ್ತಾ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ವ್ಯಕ್ತಿ ಚಾರಿತ್ರ್ಯಕ್ಕೆ ದಕ್ಕೆ ಬಾರದ ಹಾಗೆ ಸಮಾಜದಲ್ಲಿ ಒಳ್ಳೆಯ ಮಕ್ಕಳಾಗಿ ಬಾಳಿ ಎಂದು ಹಾರೈಸಿದರು.
ಮುಖ್ಯ ಅಥಿತಿಗಳು ಮಾತನಾಡುತ್ತಾ ಈ ವಿದ್ಯಾಸಂಸ್ಥಯು ಶಿಕ್ಷಣದ ಜೊತೆ ಉತ್ತಮ ಮೌಲ್ಯ ಯುತ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದು ಅದರ ಜೊತೆಗೆ ವಿದ್ಯಾಸಂಸ್ಥೆಯಲ್ಲಿ ನೀಡುತ್ತಿರುವ ಮಧ್ಯಾಹ್ನದ
ಅನ್ನಪೂರ್ಣ ಅನ್ನಯೋಜನೆಗೆ ಶ್ಲಾಘನೆ ವ್ಯಕ್ತಪಡಿಸುತ್ತಾ ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಶ್ರೀಯುತ ಜಯರಾಮ ಕೆದಿಲಾಯ ರವರು ಮಾತನಾಡುತ್ತಾ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಗೊಂಡಿದೆ ಇದನ್ನು ಪೋಷಿಸಿ ಮುಂದುವರೆಸಿಕೊಂಡು ಹೋಗುವುದು ವಿದ್ಯಾರ್ಥಿಗಳ ಮತ್ತು ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳುತ್ತಾ ಎಲ್ಲರಿಗೂ ಶುಭ ಹಾರೈಸಿದರು.
ಶ್ರೀ ಸತ್ಯ ಸಾಯಿ ಸೇವಾ ಸಂಘ ದಕ್ಷಿಣಕನ್ನಡ ಇದರ ವತಿಯಿಂದ ನಡೆದ ವಲಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡ ಭಾಷಾ ವಿಭಾಗದಲ್ಲಿ ವರ್ಷ ಲಕ್ಷ್ಮಿ (10 ನೇ ತರಗತಿ) ಪ್ರಥಮ, ದುನೇಶ್ (10 ನೇ ತರಗತಿ) ದ್ವಿತೀಯ, ಜಾಗೃತಿ (8ನೇ ತರಗತಿ ) ತೃತಿಯ. ಹಾಗೂ ಇಂಗ್ಲಿಷ್ ಭಾಷಾ ವಿಭಾಗದಲ್ಲಿ ಮಹೇಶ್ ಕುಮಾರ್ (10ನೇತರಗತಿ) ಪ್ರಥಮ, ಸಾನಿಧ್ಯ (8ನೇ ತರಗತಿ ) ದ್ವಿತೀಯ ಹಾಗೂ ವೈಷ್ಣವ್ (10 ನೇ ತರಗತಿ) ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಶ್ರೀ ದಯಾನಂದರವರು, ಸಂಚಾಲಕರು ಶ್ರೀ ಸತ್ಯಸಾಯಿ ಪುತ್ತೂರು ಇವರು ಬಹುಮಾನ ವಿತರಿಸಿದರು.
ಕಲಿಕೆಯಲ್ಲಿ ಉನ್ನತ ಸ್ಥಾನ ಪಡೆದ ಹಾಗೂ ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ ಎನ್ ರವರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಧನ್ಯವಾದ ಶ್ರೀ ರಮೇಶ್ ಮತ್ತು ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಪ್ರಶಾಂತಿ ನಡೆಸಿಕೊಟ್ಟರು
ಬಳಿಕ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, ಭರತ ನಾಟ್ಯ, ಕೀ ಬೋರ್ಡ್, ಸುಗಮ ಸಂಗೀತ ಮತ್ತು ಯಕ್ಷಗಾನ’ಸಮುದ್ರಮಥನ -ಸುದರ್ಶನ ವಿಜಯ -ಕಾರ್ತ ವೀರ್ಯಾರ್ಜುನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.