Published
4 hours agoon
By
Akkare Newsಪುತ್ತೂರು: ತಾಲೂಕು ಸರ್ಕಾರಿ ಆಸ್ಪತ್ರೆ, ಹಾರಾಡಿ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಯರ ನಿಲಯ, ಬೀರಮಲೆಯ ವಿದ್ಯಾರ್ಥಿ ನಿಲಯಕ್ಕೆ ಕರ್ನಾಟಕ ಉಪ ಲೋಕಾಯುಕ್ತ ವೀರಪ್ಪ ಬಿ. ಭಾನುವಾರ ದಿಢೀರ್ ಬೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.
ತಾಲೂಕು ಆಸ್ಪತ್ರೆಯಲ್ಲಿ ಶಬ್ದ ಹೊರಡಿಸುವ ವಿದ್ಯುತ್ ಫ್ಯಾನ್‌ಗಳಿದ್ದು, ರೋಗಿಗಳಿಗೆ ಸಮಸ್ಯೆಯಾಗುತ್ತಿರುವುದು ಕಾಣಿಸಿದೆ. ಶೌಚ ಗೃಹಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ವಿದೇಶಿ ಹಾಗೂ ಭಾರತೀಯ ಶೈಲಿಯ ಕಮೋಡುಗಳು ಕಳಪೆಗುಣಮಟ್ಟದಿಂದ ಕೂಡಿರುವುದು ಕಂಡು ಬಂದಿದೆ.
ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಬಾರದು. ಎಲ್ಲವನ್ನೂ ತಕ್ಷಣ ಸರಿಪಡಿಸುವ ಕೆಲಸ ನಡೆಯಬೇಕು. ಶವಕ್ಕೆ ಗೌರವ ನೀಡುವ ನೀಡುವ ಕೆಲಸವಾಗಬೇಕು ಆದರೆ ಆಸ್ಪತ್ರೆಯ ಶವಾಗಾರ ಹಳೆಯದಾಗಿ ಒಡೆದ ಟೈಲ್ಸ್ ಗಳು ಹಾಗೂ ಹಳೆಯ ಶೈಲಿಯ ಟೇಬಲಗಳನ್ನು ಹೊಂದಿದೆ. ಇದನ್ನು ಗಮನಿಸಿ ತಕ್ಷಣ ಶವಾಗಾರವನ್ನು ಆಧುನೀಕರಣ ಮಾಡುವುದಕ್ಕೆ ಸೂಚನೆಯನ್ನು ನೀಡಿದ್ದಾರೆ.
ಹಾರಾಡಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವೇಳೆಯಲ್ಲಿ ವಿದ್ಯಾರ್ಥಿನಿಯರಿಗೆ ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ ಸಿಗದ ಬಗ್ಗೆ, ಹಾಸ್ಟೆಲ್ ಸುರಕ್ಷತೆಗಾಗಿ ಆವರಣ ಬೇಲಿ ಇಲ್ಲದಿರುವ ಬಗ್ಗೆ, ಗ್ಯಾಸ್ ಸಿಲಿಂಡರ್ ಇಡಲು ಪ್ರತ್ಯೇಕ ಕೊಠಡಿ ಇಲ್ಲದಿರುವ ಬಗ್ಗೆ ಹಾಗೂ ವಿದ್ಯಾರ್ಥಿನಿಯರಿಗೆ ಓದಲು ಸರಿಯಾದ ಲೈಬ್ರೇರಿ ವ್ಯವಸ್ಥೆ ಇಲ್ಲದರ ಬಗ್ಗೆ ವಿದ್ಯಾರ್ಥಿಗಳು ಲೋಕಾಯುಕ್ತರಿಗೆ ದೂರು ನೀಡುವ ಕಾರ್ಯವಾಗಿದೆ.
ಬೀರಮಲೆ ವಿದ್ಯಾರ್ಥಿ ನಿಲಯ
ಬೀರಮಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿದ ಅವರು ಸಮಸ್ಯೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್, ಡಿವೈಎಸ್ಪಿ ಗಾನಾ ಪಿ. ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಅಮಾನುಲ್ಲಾ, ಸುರೇಶ್, ಚಂದ್ರಶೇಖರ್ ಉಪಸ್ಥಿತರಿದ್ದರು.
ಅಗತ್ಯ ಕ್ರಮಕ್ಕೆ ಸೂಚನೆ!
ವಿದ್ಯಾರ್ಥಿನಿಯರ ಭದ್ರತೆಯ ದೃಷ್ಠಿಯಿಂದ ಹಾಸ್ಟೆಲ್‌ನ ಸುತ್ತಲೂ ಆವರಣಕ್ಕೆ ಬೇಲಿ ಹಾಕಿಸಬೇಕು. ವಿದ್ಯಾಥಿನಿಯರಿಗೆ ಅಗತ್ಯವಾದ ಊಟದ ವ್ಯವಸ್ಥೆಯನ್ನು ಸಮಕ್ಕೆ ಸರಿಯಾಗಿ ಮಾಡಬೇಕು. ಹಾಸ್ಟೆಲ್ ಗ್ರಂಥಾಲಯಕ್ಕೆ ಹೆಚ್ಚಿನ ಪಠ್ಯ ಪುಸ್ತಕ ತರುವಲ್ಲಿ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ ಕರೆ ಮಾಡಿ ಸೂಚಿಸಿದರು. ಈ ಎಲ್ಲಾ ವ್ಯವಸ್ಥೆಯನ್ನು ಒಂದು ವಾರದ ಒಳಗೆ ಮಾಡಿದೇ ಹೋದಲ್ಲಿ ವಾರ್ಡನ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.