Published
4 hours agoon
By
Akkare Newsಉಡುಪಿ: ಅಂಬಲಪಾಡಿ ರಾ.ಹೆ. ಕಾಮಗಾರಿಗೆ ಸಂಬಂಧಿಸಿದಂತೆ ಪರ ವಿರೋಧ ಅಭಿಪ್ರಾಯವಿದ್ದು, ನ್ಯಾಯಯುತ ತೀರ್ಮಾನ ಮಾಡಿ ಕಾಮಗಾರಿ ಮುಂದುವರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾಮಗಾರಿ ಕುರಿತು ಜನರ ಅಭಿಪ್ರಾಯ, ಅಧಿಕಾರಿಗಳಿಂದ ಮಾಹಿತಿಯನ್ನೂ ಈಗಾಗಲೇ ಸಂಗ್ರ ಹಿಸಲಾಗಿದೆ.
ಮೇಲ್ಸೇತುವೆ ಕಾಮಗಾರಿಯಲ್ಲಿ ಕೆಲವು ಕಡೆ ಪಿಲ್ಲರ್‌ಗಳು ಬೇಕೆಂಬ ಬಗ್ಗೆ ಬೇಡಿಕೆ ಇದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತಗೊಳ್ಳದು ಎಂದು ಸ್ಪಷ್ಟಪಡಿಸಿದರು.