ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಪಘಾತ

ಟಯರ್ ಗಾಳಿ ತುಂಬುವಾಗ ಸ್ಪೋಟ: ಕೆಲವು ಅಡಿ ಎತ್ತರಕ್ಕೆ ಎಸೆಯಲ್ಪಟ್ಟ ಯುವಕ

Published

on

ಡಿಸೆಂಬರ್ 23: ಗಾಳಿ ತುಂಬುವಾಗ ಟಯರ್ ಸ್ಪೋಟಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ನಡೆದಿದೆ.
ಕೆಪಿಎಸ್ ಪಿಯು ಕಾಲೇಜ್ ಹಿಂಭಾಗದಲ್ಲಿ ನ ಟಯರ್ ಪಂಚರ್ ಶಾಪ್ ನಲ್ಲಿ ಬಸ್ಸಿನ ಟೈಯರಿಗೆ ಗಾಳಿ ತುಂಬುವ ಸಂದರ್ಭ
ಟಯರ್ ಸಿಡಿದಿದೆ. ಟಯರ್ ಗಾಳಿ ತುಂಬಿಸುತ್ತಿದ್ದ ಅಬ್ದುಲ್ ರಜೀದ್ (19) ಗಾಯಗೊಂಡ ಯುವಕ.

ಖಾಸಗಿ ಶಾಲೆ ಬಸ್ಸುಂದರ ಟಯರ್ ಪ್ಯಾಚ್ ಗೆಂದು ಬಂದಿದ್ದು, ಗಾಳಿ ತುಂಬಿದ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದಿದೆ. ಗಾಳಿ ತುಂಬಿಸುತ್ತಿದ್ದ ಯುವಕ ಎದ್ದು ನಿಲ್ಲುವಷ್ಟರಲ್ಲಿ ಸ್ಪೋಟ ಸಂಭವಿಸಿದ್ದು, ಟಯರ್ ನ ಸಿಡಿತಕ್ಕೆ ಸುಮಾರು ಕೆಲವು ಅಡಿ ಎತ್ತರಕ್ಕೆ ಯುವಕ ಎಸೆಯಲ್ಪಟ್ಟಿದ್ದಾನೆ.

ಅಪಘಾತದ ಹೊಡೆತಕ್ಕೆ ಯುವಕನ ಕೈ ಮುರಿತ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ದೃಶ್ಯಾವಳಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement