Published
1 year agoon
By
Akkare News
ಪುತ್ತೂರು: ಹೈಕೋರ್ಟ್ ನ್ಯಾಯಾಧೀಶ ವಿಟ್ಲ ಕೇಪು ಮೂಲದ ರಾಜೇಶ್ ರೈ ಕಲ್ಲಂಗಳ ಅವರು ಡಿ.26ರಂದು ಬೆಳಿಗ್ಗೆ ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು.

ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಸಾದ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದಿಂದ ಗೌರವಾರ್ಥವಾಗಿ ಶಲ್ಯ ತೊಡಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶ ರಾಜೇಶ್ ರೈ ಅವರ ಪತ್ನಿ ರೇಷ್ಮಾ ರಾಜೇಶ್ ರೈ ಜೊತೆಗಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ,ವಿ, ಮಹಾಬಲ ರೈ ವಳತ್ತಡ್ಕ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ನ್ಯಾಯಾಲಯದ ಪ್ರೊಟೊಕಾಲ್ ಪಾಂಡುರಂಗ ಬೇಲೀಫ್ ಉಪಸ್ಥಿತರಿದ್ದರು.

