Connect with us

ನಿಧನ

ಕಾಸರಗೋಡು : ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಸಾವು

Published

on

ಕಾಸರಗೋಡು,ಡಿ.26: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಕಾಸರಗೋಡು ನಗರದ ತೆರುವತ್ ನಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಬಾಗಲಕೋಟೆ ಯ ಪ್ರಮೋದ್ (27) ಮೃತ ಪಟ್ಟವರು. ತಳಂಗರೆ ತೆರುವತ್ ನಲ್ಲಿ ವಿವಾಹ ಮನೆಯ ಚಪ್ಪರ ತೆಗೆಯುತ್ತಿದ್ದಾಗ ಚಪ್ಪರದ ಕಂಬ ವಿದ್ಯುತ್ ತಂತಿಗೆ ತಗಲಿ ಈ ಘಟನೆ ನಡೆದಿದೆ. ಸಮೀಪದಲ್ಲೇ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಈ ಅವಘಡ ನಡೆದಿದೆ.

 

ಕೂಡಲೇ ಸಮೀಪದ ಆಸ್ಪತ್ರೆಗೆ ತಲಪಿಸಿ ದರೂ ಜೀವ ಉಳಿಸಲಾಗಳಿಲ್ಲ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement