Published
14 hours agoon
By
Akkare Newsನರಿಮೊಗರು ಹಿತ ರಕ್ಷಣಾ ವೇದಿಕೆ ಮೂರು ತಿಂಗಳ ಕಾಲಾವಕಾಶ ಕೊಟ್ಟರು ಯಾವುದೇ ಯಾವುದೇ ತಂತ್ರಜ್ಞಾನಗಳನ್ನು ಕೆಲಸ ಮುಂದುವರಿಸದೆ ಇಂದಿರಾ ನಗರದ ನೆಕ್ಕಿಲು ಎನ್ನುವ ಪ್ರದೇಶದಲ್ಲಿ ದೊಡ್ಡದಾದ ಹೊಂಡವನ್ನು ತೋಡಿ ಅದಕ್ಕೆ ಬಿಂದು ಫ್ಯಾಕ್ಟರಿಯ ಗಲೀಜು ನೀರನ್ನು ಬಿಟ್ಟು ಸಾರ್ವಜನಿಕರಿಗೆ ರೋಗ ಬರುವಂತೆ ಮಾಡಿರುವ ಬಿಂದು ಫ್ಯಾಕ್ಟರಿಯ ಹೊಸ ತಂತ್ರಜ್ಞಾನ ಈ ರೀತಿಯ ತಂತ್ರಜ್ಞಾನವನ್ನು ನಾವೇಂದು ನೋಡಿರಲಿಕ್ಕಿಲ್ಲ. ಈಚೆ ಕೆಳಗಡೆ ಬಿಡುತ್ತಿದ್ದ ನೀರನ್ನು ಅಲ್ಲಿ ಶೇಖರಣೆ ಮಾಡುತ್ತಿದ್ದು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ.
ಮುಂಚಿನ ದಿನಗಳಲ್ಲಿ ಮಾರಣಾಂತಿಕ ರೋಗಗಳು ಹೆಚ್ಚಾಗಿ ಜನರು ಸಾಯುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ರೋಗ ಹರಡುವ ಸಾಧ್ಯತೆ ಇದೆ. ಸಾರ್ವಜನಿಕರು ಕಟ್ಟೆಚ್ಚರ ವಹಿಸಿಕೊಳ್ಳಿ.
ತಾರೀಕು 26/12/2024ರಂದು ಬೆಳಿಗ್ಗೆ 10:30 ಗಂಟೆಗೆ ಗ್ರಾಮ ಪಂಚಾಯತ್ ಪಿಡಿಒ ಹಾಗೂ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರ ದೂರಿನಂತೆ ಭೇಟಿ ನೀಡಿರುತ್ತಾರೆ. ಮುಂದಿನ ಕ್ರಮ ಕೈಗೊಳ್ಳುವುದಾಗಿ ಪಂಚಾಯತಿನ ಪಿ ಡಿ ಓ ಹಾಗೂ ಆರೋಗ್ಯ ಅಧಿಕಾರಿ ಸಾರ್ವಜನಿಕರಿಗೆ ಭರವಸೆಯನ್ನು ನೀಡಿರುತ್ತಾರೆ.