Published
14 hours agoon
By
Akkare Newsಬಂಟ್ವಾಳ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಇದೀಗ ಸಂಭವಿಸಿದೆ. ಘಟನೆಯಲ್ಲಿ ಒಂದು ಮಗು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ಸಮೀಪದ ನಾವುರ ಮುರ ನಿವಾಸಿ ಸಲೀಮ್ ರವರು ಕುಟುಂಬ ಸಮೇತ ಸಂಚರಿಸುತ್ತಿದ್ದ ಬೈಕ್ ಅಪಘಾತಕ್ಕೆ ಒಳಗಾಗಿದ್ದು ಚಾಲಕ ಸಲೀಮ್ ರವರಿಗೆ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೈಕ್ ನಲ್ಲಿ ತಾಯಿ ಮಕ್ಕಳು ಸಹಿತ ಸಲೀಮ್ ರವರ ಕುಟುಂಬ ಪ್ರಯಾಣಿಸುತ್ತಿದ್ದ ವೇಳೆ ಇವರ ಬೈಕ್ ಲಾರಿ ನಡುವೆ ಅಪಘಾತ ನಡೆದಿದ್ದು ಸಲೀಮ್ ರವರ ಪುಟ್ಟ ಮಗುವೊಂದು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.