Published
15 hours agoon
By
Akkare News* ಸೈಬರ್ ಅಪರಾಧವನ್ನು ತಡೆಗಟ್ಟಲು ದೂರಸಂಪರ್ಕ ಇಲಾಖೆಯು ಕಪ್ಪು ಪಟ್ಟಿಯನ್ನು (ಬ್ಲಾಕ್ ಲಿಸ್ಟ್) ಮಾಡಲು ಪ್ರಾರಂಭಿಸಿದೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಸರಕಾರ ಚಿತ್ತ ಹರಿಸಿದೆ. ವರದಿಯ ಪ್ರಕಾರ, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ನೀಡುವವರು ಅಥವಾ ಮೋಸದ ಸಂದೇಶಗಳನ್ನು ಕಳುಹಿಸುವವರು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.
ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಸೈಬರ್ ವಂಚನೆಯಿಂದ ಮುಕ್ತಿ ನೀಡಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ. ಇನ್ಮುಂದೆ ಯಾರಿಗೆಲ್ಲ ಪುನಃ ಸಿಮ್ ಕಾರ್ಡ್ ನೀಡಲಾಗುವುದಿಲ್ಲ ಎಂಬ ಪಟ್ಟಿಯನ್ನು ಸರ್ಕಾರ ಮಾಡಲು ಪ್ರಾರಂಭಿಸಿದೆ. ಹೊಸ ಸಿಮ್ ಕಾರ್ಡ್ ನಿಯಮದ ಅಡಿಯಲ್ಲಿ, ದೂರಸಂಪರ್ಕ ಇಲಾಖೆ (DoT) ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಶುರುಮಾಡಿದೆ. ಇತ್ತೀಚೆಗೆ, ಟ್ರಾಯ್ನ ಹೊಸ ನಿಯಮಗಳ ಅಡಿಯಲ್ಲಿ, ನಕಲಿ ಕರೆಗಳು ಮತ್ತು ಎಸ್ ಎಂ ಎಸ್ ಗೆ ಕಡಿವಾಣ ಹಾಕಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ವರದಿ ಮಾಡಿದ ನಂತರ ಲಕ್ಷಾಂತರ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಲಾಗಿದೆ.
ಸಿಎನ್‌ಬಿಸಿ ಆವಾಜ್‌ನ ವರದಿಯ ಪ್ರಕಾರ, ಸೈಬರ್ ಅಪರಾಧವನ್ನು ತಡೆಗಟ್ಟಲು ದೂರಸಂಪರ್ಕ ಇಲಾಖೆಯು ಕಪ್ಪು ಪಟ್ಟಿಯನ್ನು (ಬ್ಲಾಕ್ ಲಿಸ್ಟ್) ಮಾಡಲು ಪ್ರಾರಂಭಿಸಿದೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಸರಕಾರ ಚಿತ್ತ ಹರಿಸಿದೆ. ವರದಿಯ ಪ್ರಕಾರ, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ನೀಡುವವರು ಅಥವಾ ಮೋಸದ ಸಂದೇಶಗಳನ್ನು ಕಳುಹಿಸುವವರು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಅಂತಹ ಬಳಕೆದಾರರನ್ನು ಸೈಬರ್ ಭದ್ರತೆಗೆ ಬೆದರಿಕೆ ಹಾಕುವ ವರ್ಗದಲ್ಲಿ ಇರಿಸಲಾಗುತ್ತದೆ.
3 ವರ್ಷಗಳವರೆಗೆ ನಿಷೇಧ
ಅಂತಹ ಬಳಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ, ಸಿಮ್ ಕಾರ್ಡ್ ಅನ್ನು ನಿರ್ಬಂಧಿಸಲಾಗುತ್ತದೆ. ಅಲ್ಲದೆ, 6 ತಿಂಗಳಿಂದ 3 ವರ್ಷಗಳವರೆಗೆ ಅವರ ಹೆಸರಿನಲ್ಲಿ ಯಾವುದೇ ಸಂಪರ್ಕವನ್ನು ನೀಡಲಾಗುವುದಿಲ್ಲ. ಹೊಸ ನಿಯಮಗಳ ಪ್ರಕಾರ, ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ನೀಡುವುದು ಅಪರಾಧ. ಇದಲ್ಲದೆ, ನಕಲಿ ಸಂದೇಶಗಳನ್ನು ಕಳುಹಿಸುವುದನ್ನು ಶಿಕ್ಷಾರ್ಹ ಅಪರಾಧದ ವರ್ಗದಲ್ಲಿ ಇರಿಸಲಾಗಿದೆ.
ಸಿಮ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ
2025 ರಿಂದ, ಅಂತಹ ಬಳಕೆದಾರರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಮತ್ತು ಇವರ ಸಂಪೂರ್ಣ ಮಾಹಿತಿಯನ್ನು ಎಲ್ಲಾ ಟೆಲಿಕಾಂ ಆಪರೇಟರ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ, ಇದರಿಂದಾಗಿ ಅವರ ಹೆಸರಿನಲ್ಲಿ ಮತ್ತೆ ಸಿಮ್ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ. ಸೈಬರ್ ಭದ್ರತಾ ನಿಯಮಗಳ ಅಡಿಯಲ್ಲಿ, ವ್ಯಕ್ತಿಗಳ ಮಾಹಿತಿ ರಚಿಸಲು ಸರ್ಕಾರ ನಿರ್ಧರಿಸಿದೆ. ಅಂತಹ ಬಳಕೆದಾರರ ಪಟ್ಟಿಯನ್ನು ಮಾಡಿದ ನಂತರ, ಅವರಿಗೆ ಸರ್ಕಾರದಿಂದ ನೋಟಿಸ್ ಕಳುಹಿಸಲಾಗುವುದು, ಅವರು 7 ದಿನಗಳಲ್ಲಿ ಉತ್ತರಿಸಬೇಕಾಗುತ್ತದೆ.
ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ, ಸರ್ಕಾರವು ಯಾವುದೇ ಸೂಚನೆಯಿಲ್ಲದೆ ಕ್ರಮ ಕೈಗೊಳ್ಳಬಹುದು. 6 ತಿಂಗಳಿಂದ 3 ವರ್ಷಗಳವರೆಗೆ ಹೊಸ ಸಿಮ್ ಕಾರ್ಡ್ ನೀಡಲಾಗುವುದಿಲ್ಲ. ಸೈಬರ್ ಭದ್ರತೆಗೆ ಸಂಬಂಧಿಸಿದ ಈ ನಿಯಮಗಳನ್ನು ಸರ್ಕಾರವು ಈ ವರ್ಷದ ನವೆಂಬರ್‌ನಲ್ಲಿ ತಿಳಿಸಿತ್ತು. ಇದಕ್ಕೆ ಹಲವು ಹೊಸ ನಿಬಂಧನೆಗಳನ್ನು ಸೇರಿಸಲಾಗಿದ್ದು, ಇದನ್ನು ಬಳಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.