ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀರಾಮಚಂದ್ರ ಪ್ರೌಢಶಾಲೆಗೆ ಡೆಸ್ಕ್ ಹಾಗೂ ಬೆಂಚ್ ವಿತರಣೆ

Published

on

ಡಿ. 27. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕಿನ ಪೆರ್ನೆ ವಲಯದ ‌ಪೆರ್ನೆ ಅಯೋಧ್ಯಾ ನಗರ ಶ್ರೀ ರಾಮಚಂದ್ರ ಪ್ರೌಢ ಶಾಲೆಯಲ್ಲಿ ಯೋಜನೆಯ ವತಿಯಿಂದ ಡೆಸ್ಕ್ ಹಾಗೂ ಬೆಂಚ್ ವಿತರಣೆ ಕಾರ್ಯಕ್ರಮ ನಡೆಯಿತು.
ಇದರ ಉದ್ಘಾಟನೆಯನ್ನು ವಲಯಾಧ್ಯಕ್ಷರಾದ ರಾಬರ್ಟ್ ಫೆರ್ನಾಂಡಿಸ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ದಕ್ಷಿಣ ಕನ್ನಡ-2 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಶಾಲಾ ಮಕ್ಕಳಿಗೆ ಡೆಸ್ಕ್ ಬೆಂಚ್ ಗಳನ್ನು ಹಸ್ತಾಂತರಿಸಿ “ಪೂಜ್ಯರ ಕನಸಿನಂತೆ ಗ್ರಾಮೀಣ ಪ್ರದೇಶದ ವೈಯಕ್ತಿಕ ಕುಟುಂಬ ಮಾತ್ರ ಸಬಲೀಕರಣವಾದರೆ ಸಾಲದು. ಸಮುದಾಯವು ವಿವಿಧ ವಿಷಯಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಬಲೀಕರಣವಾಗಬೇಕು.

ಮುಖ್ಯವಾಗಿ ಶಿಕ್ಷಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರದಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಅನೇಕ ವರ್ಷಗಳಿಂದ ಗ್ರಾಮೀಣ ಪ್ರದೇಶದ ಅಳಿವಿನಂಚಿನಲ್ಲಿರುವ ಶಾಲೆಗಳನ್ನು ಉಳಿಸುವುದು ಹಾಗೂ ಬಡವರ ಮಕ್ಕಳಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಆಯ್ದ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ವರ್ಷವೂ ತಾಲೂಕಿನಲ್ಲಿ 33 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ಒದಗಣೆ, ಹಲವಾರು ಶಾಲೆಗಳಿಗೆ ಡೆಸ್ಕ್ ಬೆಂಚುಗಳ ಒದಗಣೆ ಮಾಡಲಾಗಿದೆ.

 

ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆದು ಭವಿಷ್ಯವು ಜ್ಞಾನ ದೀವಿಗೆಯಾಗಲಿ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶೇಖರ್ ರೈ ವಹಿಸಿ ಯೋಜನೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ತಾಲೂಕು ಯೋಜನಾಧಿಕಾರಿ ರಮೇಶ್, ಜನಜಾಗೃತಿ ವೇದಿಕೆ ಸದಸ್ಯರಾದ ಉಮಾನಾಥ ಶೆಟ್ಟಿ, ನವೀನ್ ಕುಮಾರ್ ಪದಬರಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯಶಿಕ್ಷಕರಾದ ಸತ್ಯನಾರಾಯಣ ರೈ, ಸಹಶಿಕ್ಷಕರಾದ ಚೆನ್ನಕೇಶವ, ವಲಯ ಮೇಲ್ವಿಚಾರಕಿ ಶಾರದಾ, ಸೇವಾಪ್ರತಿನಿಧಿಗಳು, ಪೆರ್ನೆ ಬಿಳಿಯೂರು ಮತ್ತು ಪೆರ್ನೆ ಬಿ ಒಕ್ಕೂಟದ ಅಧ್ಯಕ್ಷರಾದ ಗೋಪಾಲ ಸಪಲ್ಯ, ಯಶೋದಾ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರತಿನಿಧಿ ಸುರೇಶ್ ಮತ್ತು ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement