ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಮಧ್ಯ ಪ್ರಿಯರೇ ಹುಷಾರ್..! ಹೊಸ ವರುಷಕ್ಕೆ ಬಂದಿದೆ ನಕಲಿ ಮಧ್ಯ…!!! ಕುಡಿದವರಿಗೆ ಏನಿದು ಸಮಸ್ಯೆ…??? ಈಲ್ಲಿದೆ ಫುಲ್ ಡಿಟೇಲ್ಸ್👇

Published

on

ಹೊಸವರ್ಷ ಸಡಗರ ಸಂಭ್ರಮ ಎಲ್ಲೆಡೆ ಬಲು ಜೋರಾಗಿಯೇ ಇರುತ್ತೆ. ಆದ್ರೆ ಹೊಸ ವರ್ಷದ ಸಂಭ್ರಮ ಮಾಡಬೇಕು ಎಂದುಕೊಂಡಿರುವ ಮದ್ಯ ಪ್ರಿಯರಿಗೆ ನಕಲಿ ಮದ್ಯ  ತಯಾರಕರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮುಖ್ಯವಾಗಿ ಹೊಸ ವರ್ಷಕ್ಕೆ ಮದ್ಯದ ಪಾರ್ಟಿಗೆ ಪ್ಲಾನ್ ಹಾಕಿರೋರು ಹುಷಾರ್ ಆಗಿರಿ.

ಹೌದು, ಬ್ರಾಂಡೆಡ್ ಕಂಪನಿಗಳ ಲಕ್ಷ ಲಕ್ಷ ಮೌಲ್ಯದ ಮದ್ಯವನ್ನು ನಕಲಿ ಯಾಗಿ ತಯಾರು ಮಾಡುತ್ತಿದ್ದ ತಂಡವೊಂದನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ನಕಲಿ ತಯಾರಿಕಾ ಅಡ್ಡೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಸಲಿ ಯಾವುದು, ನಕಲಿ ಯಾವುದು ಎಂದು ಕಂಡುಹಿಡಿಯಲು ಪೇಚಾಡಿದ ಘಟನೆ ನಡೆದಿದೆ.

 

ಸಾಕಷ್ಟು ನಿಯಮಾವಳಿಗಳನ್ನು ನಂತರ ಮದ್ಯ ತಯಾರು ಮಾಡುವ ಕಂಪನಿಗಳು ತಕ್ಕ ಮಟ್ಟಿಗೆ ಗುಣಮಟ್ಟ ಕಾಪಾಡಿಕೊಂ ಡು ನಿಗದಿಪಡಿಸಲಾದ ಪ್ರಮಾಣದಲ್ಲಿ ಕಂಟೆಂಟ್ ಗಳನ್ನು ಬೆರೆಸುತ್ತವೆ. ಜತೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿದ ಲೇಬಲ್, ಸ್ಟಿಕ್ಚರ್, ಸೀಲ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಆದರೆ ಈ ನಕಲಿ ಮದ್ಯ ತಯಾರಕರು ಸೇಮ್ ಟು ಸೇಮ್ ಕಂಪನಿಯ ಮದ್ಯದಂತೆ ಕಲರ್, ಸ್ಟಿಕ್ಕರ್, ಲೇಬಲ್, ಸೀಲ್ ಅಳವಡಿಸಿಕೊಂಡು ಲಕ್ಷಾಂತರ ರೂ ಮೌಲ್ಯದ ಮದ್ಯ ತಯಾರಿಕೆ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀ ಸರು ಬರೋಬ್ಬರಿ ಎಂಟೂವರೆ ಲಕ್ಷ ರುಪಾಯಿ ಮೌಲ್ಯದ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ.

 

ಮುಖ್ಯವಾಗಿ ನಕಲಿ ಮದ್ಯ ತಯಾರಿಕೆಗೆ ಕಳಪೆ ಮಟ್ಟದ ಸೀರಿಟ್, ಕಳಪೆ ಕಲರ್, ವಾಸನೆಗೆ ಕಳಪೆ ಪ್ಲೇವರ್ ಬಳಸುತ್ತಿದ್ದರು. ದಾಳಿ ನಡೆಸಿದ ಅಧಿಕಾರಿಗಳಿಗೆ ನಕಲಿ ಬ್ರಾಡೆಂಡ್ ಮದ್ಯ ತಯಾರಿಕೆಗೆ ಈ ಖದೀಮರು ಉಪಯೋಗಿಸಿ ಬಿಸಾಕಿದ ಬ್ರಾಂಡೆಡ್ ಕಂಪನಿಗಳ ಮದ್ಯದ ಬಾಟಲಿ ಸಂಗ್ರಹಿಸುತ್ತಿದ್ದರು. ಅದರಲ್ಲಿ ಅಸಲಿಯಂತೆ ಕಾಣುವ ನಕಲಿ ಮದ್ಯ ತುಂಬಿಸುತ್ತಿದ್ದರು. ಇಂತಹ 561 ಲೀಟರ್ ನಕಲಿ ಮದ್ಯವುಳ್ಳ 65 ಬಾಕ್ಸ್ ಹಾಗೂ 200 ಲೀಟರ್‌ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ.

 

ಈ ಗ್ಯಾಂಗ್ ಮಾರ್ಕೆಟ್ ನಲ್ಲಿ ಹೆಚ್ಚೆಚ್ಚು ಮಾರಾಟವಾಗುವ ಜನಪ್ರಿಯ ಬ್ರಾಂಡ್ ಗಳ ಮದ್ಯವನ್ನೇ ಡುಪ್ಲಿಕೇಟ್ ಮಾಡಿದ್ದಾರೆ. ಎಂ.ಸಿ.ಮೆಗ್ದಾಲ್‌ ನಂಬರ್ 1 ಹಾಗೂ ಇಂಪಿರಿಯಲ್ ಬ್ಲೂ ಬ್ರಾಂಡ್‌ಗಳನ್ನು ನಕಲಿ ಬಾಟಲ್ ತಯಾರಿಸಿದ್ದಾರೆ. ಗುವಾಹಟಿಯಿಂದ ಎರಡು ಕಂಪನಿಗಳ ನಕಲಿ ಸ್ಟಿಕ್ಟರ್, ಸೀಲ್, ಕರ್ನಾಟಕ ಸರ್ಕಾರದ ಹಾಲೊಗ್ರಾಮ್ ಸಹಿತವಾಗಿ ನಕಲಿ ತಯಾರಿಸಿ ನಕಲಿ ಬಾಟಲ್ ರೆಡಿ ಮಾಡಿದ್ದಾರೆ.

ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ನಕಲಿ ಮದ್ಯ ತಯಾರಿಸೋ ಅಡ್ಡೆ ಹುಟ್ಟಿಕೊಂಡಿತ್ತು. ಸಿಂದಗಿಯ ಅಮೋಘಸಿದ್ದ ಹೂಗಾರ್‌ ಎಂಬುವವರ ಜಮೀನಿನಲ್ಲಿ ಹುಬ್ಬಳ್ಳಿಯ ಕಮರಿಪೇಟೆಯಿಂದ ಬಂದಿದ್ದ ಐವರು ದಂಧೆಕೋರರು ನಕಲಿ ಬ್ರಾಂಡೆಡ್ ಮದ್ಯ ತಯಾರಿಕೆಯಲ್ಲಿ ತೊಡಗಿದ್ದರು. ಈ ವೇಳೆ ಖಚಿತ ಮಾಹಿತಿ ಬಂದ ತಕ್ಷಣ ಸಿಂದಗಿ ಹಾಗೂ ವಿಜಯಪುರ ಅಬಕಾರಿ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆರು ಆರೋಪಿಗಳನ್ನು ಬಂಧಿಸಿ, ನಕಲಿ ಮದ್ಯ ತುಂಬಿಸಿದ 18.50 ಲಕ್ಷ ಮೌಲ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಇವರೆಲ್ಲ ಹಳೆಯ ಆರೋಪಿಗಳು ಎಂಬುವುದು ಗೊತ್ತಾಗಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ತಿಳಿಸಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement